ಬಿಟಿಜಿ ತಂಡದ ನಾಯಕ ಕಿಡಾಂಬಿ ಶ್ರೀಕಾಂತ್ 
ಕ್ರೀಡೆ

ಪಿಬಿಎಲ್‍ನಲ್ಲಿ ಡಬಲ್ಸ್ ರೋಚಕತೆ: ಅಶ್ವಿನಿ

ಬ್ಯಾಡ್ಮಿಂಟನ್ ಲೀಗ್‍ನ ದ್ವಿತೀಯ ಆವೃತ್ತಿಯಾಗಿ ಮಾರ್ಪಟ್ಟಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಪಂದ್ಯಾವಳಿಯು ಮುಖ್ಯವಾಗಿ ಡಬಲ್ಸ್ ಪಂದ್ಯಗಳ...

ಬೆಂಗಳೂರು: ಬ್ಯಾಡ್ಮಿಂಟನ್ ಲೀಗ್‍ನ ದ್ವಿತೀಯ ಆವೃತ್ತಿಯಾಗಿ ಮಾರ್ಪಟ್ಟಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಪಂದ್ಯಾವಳಿಯು ಮುಖ್ಯವಾಗಿ ಡಬಲ್ಸ್ ಪಂದ್ಯಗಳ ರೋಚಕತೆಯನ್ನು ದ್ವಿಗುಣಗೊಳಿಸಲಿದೆ ಎಂದು ಕರ್ನಾಟಕದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅಭಿಪ್ರಾಯಪಟ್ಟರು.

``ಈ ಸಾಲಿನ ಪಿಬಿಎಲ್ ಪಂದ್ಯಾವಳಿಯು ಹಿಂದೆಂದೂ ಕಾಣದ ಸ್ಪರ್ಧಾತ್ಮಕ ಕಣವಾಗಿ ಮಾರ್ಪಡಲಿದೆ. ಇದು ಸಹಜವಾಗಿಯೇ ಆಟಗಾರರ ಸಾಮಥ್ರ್ಯವನ್ನು ಒರೆಗೆ ಹಚ್ಚುತ್ತದೆ. ಮುಖ್ಯವಾಗಿ  ಡಬಲ್ಸ್ ವಿಭಾಗದ ಪಂದ್ಯಗಳಂತೂ ಉದ್ವೇಗದ ಗೂಡಾಗಿ ಪರಿಣಮಿಸಿದರೆ ಅಚ್ಚರಿ ಪಡಬೇಕಿಲ್ಲ. ಎಲ್ಲ ಆರೂ ತಂಡಗಳು ಪರಿಣಾಮಕಾರಿ ಡಬಲ್ಸ್ ಆಟಗಾರರನ್ನು ಹೊಂದಿರುವುದು ಇದಕ್ಕೆ  ಕಾರಣ'' ಎಂದು ಮಂಗಳವಾರ `ಬೆಂಗಳೂರು ಟಾಪ್ ಗನ್ಸ್' ತಂಡದ ಅನಾವರಣದ ಸಂದರ್ಭದಲ್ಲಿ ಪೊನ್ನಪ್ಪ ತಿಳಿಸಿದರು. ಪಿಬಿಎಲ್ ಮುಂದಿನ ಜ. 2ರಿಂದ 17ರವರೆಗೆ ನಡೆಯಲಿದ್ದು, ಜ.12, 13ರ  ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದು, ಫೈನಲ್ ದೆಹಲಿಯಲ್ಲಿ ನಡೆಯಲಿದೆ

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್)ನಲ್ಲಿ ನೂತನವಾಗಿ ಸೇರಿಸಲಾಗಿರುವ ಟ್ರಂಪ್ ಮ್ಯಾಚ್ ನಿಯಮ ಮಹತ್ವದ್ದು. ಇದೊಂದು ಹೊಸ ಮಾದರಿ. ಪ್ರತಿಯೊಂದು ತಂಡಕ್ಕೂ ಇದೊಂದು  ಸವಾಲಾಗಲಿದೆ.
- ಕಿಡಾಂಬಿ ಶ್ರೀಕಾಂತ್, ಬಿಟಿಜಿ ತಂಡದ ನಾಯಕ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

SCROLL FOR NEXT