ಓಜೋನ್ 
ಕ್ರೀಡೆ

ಸಿಐಎಲ್ ಮಣಿಸಿದ ಓಜೋನ್

ಪಂದ್ಯದ ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ಕಂಡುಬಂದ ತುರುಸಿನ ಕಾದಾಟದಲ್ಲಿ ಸಿಐಎಲ್ ಎದುರು ಇನ್ನಷ್ಟು ಆಕ್ರಮಣಕಾರಿಯಾದ ಓಜೋನ್...

ಬೆಂಗಳೂರು: ಪಂದ್ಯದ ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ಕಂಡುಬಂದ ತುರುಸಿನ ಕಾದಾಟದಲ್ಲಿ ಸಿಐಎಲ್ ಎದುರು ಇನ್ನಷ್ಟು ಆಕ್ರಮಣಕಾರಿಯಾದ ಓಜೋನ್ ಬೆಂಗಳೂರು ಎಫ್ ಸಿ ತಂಡ 42 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು.

ಸೋಮವಾರ ಇಲ್ಲಿನ ಬೆಂಗಳೂರು ಜಿಲ್ಲಾ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ  ಬಿಡಿಎಫ್ಎ ಆಶ್ರಯದ ಸೂಪರ್ ಡಿವಿಷನ್ ಪಂದ್ಯಾವಳಿಯಲ್ಲಿ ಪಂದ್ಯದ ಮೊದಲಾರ್ಧದಲ್ಲೇ ಸಿಐಎಲ್ ವಿರುದ್ಧ ಓಜೋನ್ 20 ಮುನ್ನಡೆ ಸಾಧಿಸಿ ಕೊನೆಯವರೆಗೂ ಮಿಂಚಿನ ಆಟವಾಡಿತು. ಪಂದ್ಯ ಮುಗಿಯಲು ಇನ್ನು ಕೇವಲ ಒಂದು ನಿಮಿಷ ಇದೆ ಎನ್ನುವಾಗ ದಿನೇಶ್ ಬಾರಿಸಿದ ಗೋಲು, ಓಜೋನ್ ತಂಡ ಕಂಟ್ರೋಲರ್ ಆಫ್ ಇನ್‍ಸ್ಪೆಕ್ಷನ್ ಎಲೆಕ್ಟ್ರಾನಿಕ್ಸ್ (ಸಿಐಎಲ್) ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಲು ನೆರವಾಯಿತು.

ಓಜೋನ್ ಪರ ವಿವೇಕಾನಂದ (14ನೇ ನಿ.), ಆ್ಯಂಟೊ ಕ್ಸೇವಿಯರ್ (29ನೇ ನಿ.), ಡಾಪ್ ಬಾಸ್ಕೊ (58ನೇ ನಿ.) ಮತ್ತು ದಿನೇಶ್ 89ನೇ ನಿಮಿಷಗಳಲ್ಲಿ ತಲಾ ಒಂದೊಂದು ಗೋಲು ಬಾರಿಸಿದರೆ, ಸಿಐಎಲ್ ಪರ ಸತೀಶ್ 59 ಮತ್ತು ಆರ್.ಸಿ. ಪ್ರಕಾಶ್ 75ನೇ ನಿಮಿಷದಲ್ಲಿ ಪೆನಾಲ್ಟಿ ಗೋಲು ಹೊಡೆದರು. ಪಂದ್ಯದ 14ನೇ ನಿಮಿಷದಲ್ಲಿ ವಿವೇಕಾನಂದ ಹಾಗೂ ಆ್ಯಂಟೋ ಕ್ಸೇವಿಯರ್ (29ನೇ ನಿ.) ತಲಾ ಒಂದೊಂದು ಗೋಲು ದಾಖಲಿಸಿ ಸಿಐಎಲ್ ಮೇಲೆ ಒತ್ತಡ ಹೇರಿದರು. ಓಜೋನ್‍ನ ಈ ಆಕ್ರಮಣಕಾರಿ ಆಟಕ್ಕೆ ಪ್ರತಿ ಹೇಳಲು ಸಿಐಎಲ್‍ನ ಆಟಗಾರರು ಇನ್ನಿಲ್ಲದಂತೆ ಶ್ರಮಿಸಿದರೂ, ವಿರಾಮದ ತನಕ ಸಿಐಎಲ್ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಇನ್ನು ವಿರಾಮದ ನಂತರವೂ ಓಜೋನ್ ತನ್ನ ಗೋಲಿನ ದಾಳಿಯನ್ನು ಮುಂದುವರೆಸಿತು. ಡಾನ್ ಬಾಸ್ಕೋ ಸಿಐಎಲ್ ಗೋಲಿನ ಮೇಲೆ ದಾಳಿ ನಡೆಸಿ ಅಂತರವನ್ನು 30ಗೆ ಹೆಚ್ಚಿಸಿದರು. ಆದರೆ, ಭಾರತದ ಮಾಜಿ ಆಟಗಾರ ಆರ್.ಸಿ. ಪ್ರಕಾಶ್ ಅವರಿಂದ ಸಂಘಟಿತವಾಗಿದ್ದ ಸಿಐಎಲ್‍ನ ಯುವ  ಆಟಗಾರರು ಈ ಹಂತದಲ್ಲಿ ಇನ್ನಷ್ಟು ಛಲದಿಂದ ಕಾದಾಡಿದರು.

ಬಾಸ್ಕೋ ಬಾರಿಸಿದ ಗೋಲಿಗೆ ಉತ್ತರವಾಗಿ ಒಂದೇ ನಿಮಿಷದ ಅಂತರದಲ್ಲಿ ಸತೀಶ್ ಗೋಲು ಬಾರಿಸಿ 13ಕ್ಕೆ ಅಂತರವನ್ನು ತಗ್ಗಿಸಿದರೆ, ಪಂದ್ಯದ 75ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಪ್ರಕಾಶ್ ಗೋಲಾಗಿ ಪರಿವರ್ತಿಸುವ ಮೂಲಕ ಅಂತರವನ್ನು 23ಕ್ಕೆ ಕುಗ್ಗಿಸಿದರು. ಆದರೆ, ಮೊದಲ ಬಾರಿಗೆ ಹೊಸದಾಗಿ ಸಂಘಟಿತಗೊಂಡಿರುವ ಓಜೋನ್ ತಂಡ ಇನ್ನಷ್ಟು ವೈಭವ ಕಾಣುವಂತೆ ಪಂದ್ಯ ಮುಗಿಯುವ ಅಂತಿಮ ಕ್ಷಣದಲ್ಲಿ ದಿನೇಶ್ ಸಿಐಎಲ್‍ಗೆ ಮತ್ತೊಂದು ಪೆಟ್ಟು ನೀಡಿದರು. ಪೋಸ್ಟಲ್‍ಗೆ ಜಯ ಇನ್ನು ಇದಕ್ಕೂ ಮುನ್ನ ನಡೆದ  'ಎ' ಡಿವಿಷನ್ ಲೀಗ್‍ನಲ್ಲಿ ಪೋಸ್ಟಲ್ ಇಲಾಖೆ 21 ಗೋಲುಗಳಿಂದ ಬಿಯುಎಫ್ ಸಿ ತಂಡದ ವಿರುದ್ಧ ಜಯ ಸಾಧಿಸಿತು. ಪ್ರಥಮಾರ್ಧದ 20ನೇ ನಿಮಿಷದಲ್ಲಿ ಶರತ್ ಬಿಯುಎಫ್ ಸಿ ಪರ ಗೋಲು ತಂದಿತ್ತರೂ, ವಿರಾಮದ ನಂತರ ಸುಹಾಸ್ (36ನೇ ನಿ.) ಮತ್ತು ಇರ್ಫಾನ್ (43ನೇ ನಿ.) ತಲಾ ಒಂದೊಂದು ಗೋಲು ಹೊಡೆದು ತಂಡಕ್ಕೆ ಜಯ ತಂದಿತ್ತರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ