ನವದೆಹಲಿ: ಮುಂದಿನ ತಿಂಗಳ 25ರಿಂದ ಫೆಬ್ರವರಿ 3ರವರೆಗೆ ಡಾ. ಕಾರ್ಣೀಸಿಂಗ್ ರೇಂಜ್‍ನಲ್ಲಿ ನಡೆಯಲಿರುವ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ
ಶೂಟರ್ಗಳು ಭಾರತಕ್ಕೆ ಆಗಮಿಸಲಿದ್ದಾರೆ. ಈ ವಿಚಾರವನ್ನು ಪಾಕಿಸ್ತಾನ ರಾಷ್ಟ್ರೀಯ ರೈಫಲ್ಸ್ ಸಂಸ್ಥೆ (ಎನ್ಆರ್ಎಪಿ)ಯ ಅಧ್ಯಕ್ಷ ರಾಜಿ ಅಹ್ಮದ್ ಖಾನ್ ತಿಳಿಸಿದ್ದಾರೆ. ಅಕ್ಟೋಬರ್ನಲ್ಲಿ ಇದೇ ಸ್ಥಳದಲ್ಲೇ ನಡೆದಿದ್ದ 8ನೇ ಏಷ್ಯನ್ ಏರ್ಗನ್ ಶೂಟಿಂಗ್ ಚಾಂಪಿಯನ್ಶಿಪ್ನಿಂದ ಪಾಕಿಸ್ತಾನ ಹಿಂದೆ ಸರಿದಿತ್ತು. ಆದರೆ, ಕಳೆದ ತಿಂಗಳು ಕುವೈತ್ನಲ್ಲಿ ನಡೆದಿದ್ದ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್‍ಗೆ 12 ಜನರ ತಂಡವನ್ನು ಪಾಕಿಸ್ತಾನ ಕಳುಹಿಸಿತ್ತು. ಆದರೀಗ, ಒಲಿಂಪಿಕ್ಸ್ ಅರ್ಹತೆ ಕಾರಣದಿಂದ ಪಾಕಿಸ್ತಾನ ತಂಡ ಭಾರತಕ್ಕೆ ಕಾಲಿಡುತ್ತಿದೆ.