ಕ್ರೀಡೆ

ಶರ್ಟ್ ಬಿಚ್ಚಲು ನಿರಾಕರಿಸಿದ್ದ ಸಚಿನ್, ದ್ರಾವಿಡ್: ಶುಕ್ಲಾ

ನವದೆಹಲಿ: ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ  ನಡೆದ 2002ರ ನ್ಯಾಟ್‍ವೆಸ್ಟ್ ಟ್ರೋಫಿ  ಕ್ರಿಕೆಟ್  ಫೈನಲ್‍ನಲ್ಲಿ ರೋಚಕ ಗೆಲವು ದಾಖಲಿಸಿದ ನಂತರ ನಾಯಕ ಸೌರವ್ ಗಂಗೂಲಿ, ತಂಡದ ಎಲ್ಲಾ ಸದಸ್ಯರು ತಮ್ಮಂತೆ ಶರ್ಟ್ ಬಿಚ್ಚಿ ಸಂಭ್ರಮಿಸಬೇಕು ಎಂದು ಕೇಳಿಕೊಂಡಾಗ, ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಈ ರೀತಿಚಯಾದ ಸಂಭ್ರಮವನ್ನು ನಿರಾಕರಿಸಿದ್ದರು ಎಂದು ಆಗಿನ ತಂಡದ ಮ್ಯಾನೇಜರ್ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಆ ಪಂದ್ಯದಲ್ಲಿ 325 ರನ್‍ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಮೊಹಮದ್ ಕೈಫ್ (ಅಜೇಯ 87) ಹಾಗೂ ಯುವರಾಜ್ ಸಿಂಗ್ (69) ಅವರ 121 ರನ್‍ಗಳ ಶತಕದ ಜತೆಯಾಟದಿಂದ ಭಾರತಕ್ಕೆ 2 ವಿಕೆಟ್ ಗೆಲವು ದಾಖಲಿಸಲು ನೆರವಾಗಿದ್ದರು. ಈ ಗೆಲವು ದೊರೆಯುತ್ತಿದ್ದಂತೆ ಲಾರ್ಡ್ಸ್ ಅಂಗಣದ ಆಟಗಾರರ ಗ್ಯಾಲರಿಯಲ್ಲಿದ್ದ ಭಾರತ ತಂಡದ ಆಟಗಾರರು ಇದೇ ರೀತಿ ಸಂಭ್ರಮಿಸಬೇಕೆಂದು ಗಂಗೂಲಿ ನಿರೀಕ್ಷಿಸಿದ್ದರು.

ಆದರೆ, ತಂಡದಲ್ಲಿ ಹಿರಿಯ ಆಟಗಾರರಾಗಿದ್ದ ಸಚಿನ್, ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಇದಕ್ಕೆ ಸಮ್ಮತಿ ನೀಡಲಿಲ್ಲ ಎಂದು ಶುಕ್ಲಾ ತಮ್ಮ ನೆನಪು ಮೆಲುಕು ಹಾಕಿದ್ದಾರೆ.

SCROLL FOR NEXT