ವಿಶ್ವಕಪ್ ಉದ್ಘಾಟನಾ ಸಮಾರಂಭ (ಚಿತ್ರಕೃಪೆ: ಐಸಿಸಿ ಟ್ವಿಟರ್) 
ಕ್ರೀಡೆ

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಆದ್ಧೂರಿ ಚಾಲನೆ

ಐಸಿಸಿ ವಿಶ್ವಕಪ್ 2015 ಟೂರ್ನಿಗೆ ಗುರುವಾರ ಆದ್ಧೂರಿ ಚಾಲನೆ ದೊರೆತಿದ್ದು, ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ವಿವಿಧ ದೇಶಗಳ ಸಂಸ್ಕೃತಿ ಅನಾವರಣಗೊಂಡಿತು..

ಕ್ರೈಸ್ಟ್ ಚರ್ಚ್: ಐಸಿಸಿ ವಿಶ್ವಕಪ್ 2015 ಟೂರ್ನಿಗೆ ಗುರುವಾರ ಆದ್ಧೂರಿ ಚಾಲನೆ ದೊರೆತಿದ್ದು, ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ವಿವಿಧ ದೇಶಗಳ ಸಂಸ್ಕೃತಿ ಅನಾವರಣಗೊಂಡಿತು.

ನ್ಯೂಜಿಲ್ಯಾಂಡ್‌ನ ಕ್ರಿಸ್ಟ್‌ಚರ್ಚ್‌ನಲ್ಲಿರುವ ನಾರ್ತ್ ಹಗ್‌ಲೇ ಪಾರ್ಕ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು, ಕಾರ್ಯಕ್ರಮಕ್ಕೆ ವಿವಿಧ ದೇಶಗಳಿಂದ ಆಗಮಿಸಿದ್ದ ಹಲವು ಕಲಾತಂಡಗಳು ತಮ್ಮ ತಮ್ಮ ದೇಶದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದ ಸಾವಿರಾರು ಕ್ರೀಡಾ ಪ್ರೇಮಿಗಳಿಗೆ ರಸದೌತಣ ನೀಡಿದವು.

ಇನ್ನು ಕಾರ್ಯಕ್ರಮದಲ್ಲಿ ನ್ಯೂಜಿಲೆಂಡ್‌ನ ಪ್ರಮುಖ ಕ್ರಿಕೆಟಿಗರಾದ ಸರ್ ರಿಚರ್ಡ್ ಹ್ಯಾಡ್ಲಿ, ಸ್ಟೀಫನ್ ಫ್ಲೆಮಿಂಗ್ ಮತ್ತು ಬ್ರೆಂಡನ್ ಮ್ಯಾಕೆಲ್ಲಮ್ ಅವರು ಸೇರಿದಂತೆ ಪ್ರಮುಖ ಕ್ರಿಕೆಟ್ ತಾರೆಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಮುಖ ವ್ಯಕ್ತಿಗಳಾಗಿದ್ದಾರೆ.

ಇದಲ್ಲದೆ ಅಸ್ಟ್ರೇಲಿಯಾದ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಮತ್ತು ಸಂಗೀತ ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು, ಆಸ್ಟ್ರೇಲಿಯಾದ ಆರ್ ಆ್ಯಂಡ್ ಬಿ ಮತ್ತು ಪಾಪ್ ಗಾಯಕಿ ಜೆಸ್ಸಿಕಾ ಹಿಲ್ಡಾ ಮೊಬಾಯ್, ಗಾಯಕಿ ಟೀನಾ ಅರೇನಾ, ನಥೇನಿಯಲ್ ಮತ್ತು ಡಾರ್ಯಲ್ ಬ್ರೇತ್‌ವೇಟ್ ಮೊದಲಾದವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಮೊದಲ ಪಂದ್ಯ ಫೆ.14ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿದ್ದು, ನಂತರ ಅದೇ ದಿನ ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸೆಣೆಸಲಿವೆ. ಕೋಟ್ಯಂತರ ಅಭಿಮಾನಿಗಳನ್ನು ತನ್ನತ್ತ ಸೆಳೆದಿರುವ ಕ್ರಿಕೆಟ್ ಹಬ್ಬ ಆರಂಭವಾಗಿದೆ. 14 ತಂಡಗಳು ಫೆ.14ರಿಂದ ಮಾ.29ರ ತನಕ ನಡೆಯಲಿರುವ ಕ್ರಿಕೆಟ್ ಟೂರ್ನಿಯಲ್ಲಿ ಸೆಣಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!