ಸಾಂದರ್ಭಿಕ ಚಿತ್ರ 
ಕ್ರೀಡೆ

ಬಗಾನ್ ಗೆ ತತ್ತರಿಸಿದ ಬೆಂಗಳೂರು ಎಫ್ ಸಿ

ಅತಿಥೇಯ ಮೋಹನ್ ಬಗಾನ್ ಆಟಗಾರರ ಆಕ್ರಮಣಕಾರಿ ಆಟದ ಮುಂದೆ ಮಂಕಾದ ಬೆಂಗಳೂರು ಎಫ್ ಸಿ ಐ-ಲೀಗ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ...

ಕೋಲ್ಕತಾ: ಅತಿಥೇಯ ಮೋಹನ್ ಬಗಾನ್ ಆಟಗಾರರ ಆಕ್ರಮಣಕಾರಿ ಆಟದ ಮುಂದೆ ಮಂಕಾದ ಬೆಂಗಳೂರು ಎಫ್ ಸಿ ಐ-ಲೀಗ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ. ಶುಕ್ರವಾರ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೋಹನ್ ಬಗಾನ್ 4-1 ಗೋಲುಗಳ ಅಂತರದಲ್ಲಿ ಬೆಂಗಳೂರು ಎಫ್ ಸಿ ವಿರುದ್ಧ ಗೆಲವು ದಾಖಲಿಸಿತು.

ಈ ಪಂದ್ಯ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಕನಸು ಕಾಣುತ್ತಿದ್ದ ಬೆಂಗಳೂರು ಎಫ್ ಸಿ, ಪಂದ್ಯದ 8ನೇ ನಿಮಿಷದಲ್ಲಿ ನಾಯಕ ಸುನೀಲ್ ಛೆಟ್ರಿ ದಾಖಲಿಸಿದ ಗೋಲಿನ ನೆರವನಿಂದ ಪಂದ್ಯದಲ್ಲಿ 1-2 ಮುನ್ನಡೆ ಸಾಧಿಸಿತು. ನಂತರ 31ನೇ ನಿಮಿಷದಲ್ಲಿ ನೋರ್ಡೆ ದಾಖಲಿಸಿದ ಗೋಲ್ ನ ನೆರವಿನಿಂದ ಬಗಾನ್ ತಂಡ 1-1 ರ ಸಮಬಲ ಸಾದಿಸಿತು.

ಆದರೆ ಪಂದ್ಯದ ಅಂತಿಮ ಘಟ್ಟದಲ್ಲಿ ಬಗಾನ್ ತಂಡದ ಸಂಘಟಿತ ದಾಳಿ ನಡೆಸಿ ಕೇವಲ 14 ನಿಮಿಷ ಅಂತರದಲ್ಲಿ 3 ಗೋಲು ದಾಖಲಿಸಿತು. ಪಂದ್ಯದ 76ನೇ ನಿಮಿಷ ನೊರ್ಡೆ, 86ನೇ ನಿಮಿಷ ಯೂಸಾ, 90+2ನೇ ನಿಮಿಷದಲ್ಲಿ ಬಿಕ್ರಮ್ ಜಿತ್ ಗೋಲು ದಾಖಲಿಸಿ ತಂಡಕ್ಕೆ ಅರ್ಹ ಗೆಲವು ತಂದುಕೊಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

ಬಂಗಾಳ ಕೊಲ್ಲಿಯಲ್ಲಿ ಭೂಕಂಪ: ವಿಶಾಖಪಟ್ಟಣಂನಲ್ಲೂ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲು..!

ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿದ ಡೆಲಿವರಿ ಬಾಯ್: ಮಹಿಳೆಗೆ ಕಿರುಕುಳ, Video ವೈರಲ್

5ನೇ T20I: ಟ್ರಾಫಿಕ್‌ ಜಾಮ್ ನಲ್ಲಿ ಸಿಲುಕಿದ ಟೀಂ ಇಂಡಿಯಾ, 45 ನಿಮಿಷಗಳ ಕಾಲ ಪಂದ್ಯ ಮುಂದೂಡಿಕೆ!

ಅಮೆರಿಕದಲ್ಲಿ ಕೌಟುಂಬಿಕ ಹಿಂಸಾಚಾರ: ಭಾರತೀಯ ಮೂಲದ ಗೂಗಲ್ ಟೆಕ್ಕಿ ಹತ್ಯೆ; ಮಗನಿಗೂ ಗುಂಡೇಟು!