ಆಸ್ಟ್ರೇಲಿಯಾ ಸ್ಪಿನ್ ಮಾಂತ್ರಿಕನ ರಿಯಲ್ ಎಸ್ಟೇಟ್ ಅಭಿರುಚಿ!
ಆಸ್ಟ್ರೇಲಿಯಾ ಕ್ರಿಕೆಟಿಗರಲ್ಲೇ ಅತಿ ಶೋಕಿವಾಲಾ ಅಂತಲೇ ಹೆಸರು ಮಾಡಿರುವ ಸ್ಪಿನ್ ದಂತಕಥೆ ಶೇನ್ ವಾರ್ನ್ಗೆ ಸಂಬಂಧಪಟ್ಟ ಸುದ್ದಿಯಿದು.
ಆಸ್ಟ್ರೇಲಿಯಾ ಕ್ರಿಕೆಟಿಗರಲ್ಲೇ ಅತಿ ಶೋಕಿವಾಲಾ ಅಂತಲೇ ಹೆಸರು ಮಾಡಿರುವ ಸ್ಪಿನ್ ದಂತಕಥೆ ಶೇನ್ ವಾರ್ನ್ಗೆ ಸಂಬಂಧಪಟ್ಟ ಸುದ್ದಿಯಿದು.
ಈ ಬಾರಿ ವಾರ್ನ್ ಅವರು ಸುದ್ದಿಯಾಗುತ್ತಿರುವುದು ಹುಡುಗಿಯರೊಂದಿಗಿನ ಚೆಲ್ಲಾಟದಿಂದಲ್ಲ, ಬದಲಿಗೆ ಮನೆ ಮಾರಾಟದ ಹವ್ಯಾಸದಿಂದ !
ಏನು?! ಮನೆ ಮಾರುವುದು ಒಂದು ಹವ್ಯಾಸವೇ ಅಂತ ಕೇಳ್ಬೇಡಿ. ಕಳೆದ 20 ವರ್ಷಗಳಲ್ಲಿ ಅವರು ನಾಲ್ಕು ಬಂಗಲೆಗಳನ್ನು ಕೊಂಡು ಮಾರಿದ್ದಾರೆ! ಐಶಾರಾಮಿ ಬಂಗಲೆಗಳನ್ನು ಕೊಳ್ಳುವುದು ಮಾರುವುದು ಅವರಿಗಿರುವ ಮತ್ತೊಂದು ಹವ್ಯಾಸ ಅಂತ ಅವರನ್ನು ಬಲ್ಲವರು ಹೇಳುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಮತ್ತೊಂದು ಐಶಾರಾಮಿ ಬಂಗಲೆಯನ್ನು ರು.54 ಕೋಟಿ ಮೊತ್ತಕ್ಕೆ ಮಾರಿದ್ದಾರೆ.