ರಷ್ಯಾದ ಮರಿಯಾ ಶರಪೋವಾ (ಸಂಗ್ರಹ ಚಿತ್ರ) 
ಕ್ರೀಡೆ

ಫೆಡರರ್, ಶರಪೋವಾಗೆ ಪ್ರಯಾಸದ ಜಯ

ಸ್ವಿಡ್ಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ರಷ್ಯಾದ ಮಾರಿಯಾ ಶರಪೋವಾ ಕ್ರಮವಾಗಿ ಪುರುಷರ...

ಮೆಲ್ಬರ್ನ್: ಸ್ವಿಡ್ಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ರಷ್ಯಾದ ಮಾರಿಯಾ ಶರಪೋವಾ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ನ ದ್ವಿತೀಯ ಸುತ್ತಿಗೆ ಪದಾರ್ಪಣೆ ಮಾಡಿದ್ದಾರೆ. ಆದರೆ ಇವರಿಬ್ಬರಿಗೂ ಈ ಜಯ ಅಷ್ಟು ಸುಲಭವಾಗಿ ದಕ್ಕಲಿಲ್ಲ.

ಫೆಡರರ್‌ಗೆ ಅವರ ವಿರುದ್ಧ ಸೆಣೆಸಿದ ಇಟಲಿಯ ಸೈಮನ್ ಬೊಲೋಲಿ ಅವರು ತೀವ್ರ ಪೈಪೋಟಿ ನೀಡಿದರೆ, ಇನ್ನು ಶರಪೋವಾಗೆ ಅವರ ದೇಶದವರೇ ಆದ ಅಲೆಕ್ಸಾಂಡ್ರಾ ಪನೋವಾ ತೀವ್ರ ಪ್ರತಿಸ್ಪರ್ಧೆ ನೀಡಿದರು. ಈ ಅಡೆತಡೆಗಳನ್ನು ದಾಟಿದ ಜೊಕೊ, ಶರಪೋವಾ ದ್ವಿತೀಯ ಸುತ್ತಿಗೆ ಪದಾರ್ಪಣೆ ಮಾಡುವಲ್ಲಿ ಯಶಸ್ವಿಯಾದರು.

ಫೆಡರರ್‌ಗೆ ಪೈಪೋಟಿ ನೀಡಿದ ಸೈಮನ್, ಪಂದ್ಯದ ಮೊದಲ ಸೆಟ್‌ನಲ್ಲೇ ಪರಾಕ್ರಮ ತೋರಿಸಿದರು. 6-3 ಅಂತರದಿಂದ ಮೊದಲ ಸೆಟ್ ಗೆಲ್ಲುವ ಮೂಲಕ, ನಾಲ್ಕು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಫೆಡರರ್‌ಗೆ ಚುರುಕು ಮುಟ್ಟಿಸಿದರು. ಆದರೆ ಇನ್ನುಳಿದ ಸೆಟ್‌ಗಳಲ್ಲಿ 6-3, 6-2, 6-2 ಅಂತರದಲ್ಲಿ ಜಯ ಗಳಿಸಿದ ಅವರು, ಮುಂದಿನ ಸುತ್ತಿಗೆ ಪಾದಾರ್ಪಣೆ ಮಾಡಿದರು.

ಇನ್ನು, 2ನೇ ಶ್ರೇಯಾಂಕಿತೆ ಮಾರಿಯಾ ಶರಪೋವಾ ಸಹ ತಮ್ಮ ಎದುರಾಳಿ ಅಲೆಕ್ಸಾಂಡ್ರಾ ಅವರಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಮೊದಲ ಸೆಟ್‌ನಲ್ಲಿ ರಷ್ಯಾದ ಆಟಗಾರ್ತಿ 6-1ರ ಅಂತರದಲ್ಲಿ ಜಯ ಸಾಧಿಸಿದರಾದರೂ, 2ನೇ ಸೆಟ್‌ನಲ್ಲಿ ಜಯ 6-4 ಅಂತರದಲ್ಲಿ ಅಲೆಕ್ಸಾಂಡ್ರಾ ಪಾಲಾಯಿತು. ಅನಂತರ 3ನೇ ಸೆಟ್‌ನಲ್ಲಿ ಪುಟಿದೆದ್ದ ಶರಪೋವಾ, 7-5ರಿಂದ ಗೆಲ್ಲುವ ಮೂಲಕ ಪಂದ್ಯದಲ್ಲಿ ಜಯ ಸಾಧಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

"RSS ನಲ್ಲಿ ಜೆನ್ ಝೀಗಳೇ ಅತಿ ದೊಡ್ಡ ಸಂಖ್ಯೆ": ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್

kerala: ಸ್ಕೂಟರ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ: 4 ಮಂದಿಗೆ ಗಂಭೀರ ಗಾಯ, Video

ತುಮಕೂರು: ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ; ಕಾರಣ ನಿಗೂಢ!