ಕ್ರೀಡೆ

ಭಾರತದಲ್ಲಿ 2016ರ ಟಿ-20 ವಿಶ್ವಕಪ್

Vishwanath S

ದುಬೈ: 2016ರ ಟಿ-20 ವಿಶ್ವಕಪ್ ಕ್ರಿಕೆಟ್‌ಗೆ ಭಾರತ ಆತಿಥ್ಯವನ್ನು ವಹಿಸಲಿದ್ದು, ಮಾರ್ಚ್ 11 ರಿಂದ ಏಪ್ರಿಲ್ 3ರ ತನಕ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಈ ವೇಳಾಪಟ್ಟಿಗೆ ಐಸಿಸಿ ಅನುಮೋದನೆ ನೀಡಿದೆ.

2017ರಲ್ಲಿ ಜೂನ್‌ 1ರಿಂದ 19ರ ತನಕ ಇಂಗ್ಲಂಡ್‌ನ‌ಲ್ಲಿ ನಡೆಯಲಿರುವ ಚಾಂಪ್ಯನ್ಸ್‌ ಟ್ರೋಫಿ ವೇಳಾಪಟ್ಟಿಗೆ ಮಂಡಳಿಯು ಅನುಮೋದನೆ ನೀಡಿತು. 2019ರಲ್ಲಿ ಇಂಗ್ಲಂಡ್‌ 50 ಓವರ್‌ಗಳ ವಿಶ್ವ ಕಪ್‌ ಪಂದ್ಯವನ್ನು ಮೇ 30ರಿಂದ ಜೂನ್‌ 15ರ ವರೆಗೆ ನಡೆಸಿಕೊಡಲಿದೆ. 2017ರ ವನಿತಾ ವಿಶ್ವಕಪ್‌ ಆಗಸ್ಟ್‌ 4ರಿಂದ 27ರ ವರೆಗೆ ಇಂಗ್ಲಂಡ್‌ನ‌ಲ್ಲಿ ನಡೆಯಲಿದೆ.

2018ರ ವನಿತಾ ಟಿ-20 ವಿಶ್ವಕಪ್‌ ವೆಸ್ಟ್‌ ಇಂಡೀಸ್‌ನಲ್ಲಿ ನವೆಂಬರ್‌ 2ರಿಂದ 25ರ ವರೆಗೆ ನಡೆಯಲಿದೆ.

ವಿಶ್ವಕಪ್‌ನ ಫೈನಲ್‌ ಪಂದ್ಯ ‘ಟೈ’ ಆದರೆ ಸೂಪರ್‌ ಓವರ್ : ದುಬೈಯಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಮತ್ತೊಂದು ತೀರ್ಮಾನವನ್ನು ಕೈಗೊಂಡಿತು. ವಿಶ್ವಕಪ್ ಫೈನಲ್ ಪಂದ್ಯವು ಟೈ ಆದರೆ  ಅದಕ್ಕೆ ಸೂಪರ್‌ ಓವರ್‌ನ ಮೂಲಕ ಪಂದ್ಯದ ಫಲಿತಾಂಶವನ್ನು ಕಂಡುಕೊಳ್ಳಲಾಗುವುದು ಎಂದು ಸಭೆಯು ತೀರ್ಮಾನ ತೆಗೆದುಕೊಂಡಿತು.

SCROLL FOR NEXT