ಕ್ರೀಡೆ

ರಾಂಚಿಯ ಸೋಲು ತಪ್ಪಿಸಿದ ಜಾಕ್ಸನ್

ನಾಯಕ ಆಶ್ಲೇ ಜಾಕ್ಸನ್ ಗಳಿಸಿದ ಗೋಲ್ ನ ನೆರವಿನಿಂದಾಗಿ, ಆತಿಥೇಯ ರಾಂಚಿ ತಂಡ...

ರಾಂಚಿ: ನಾಯಕ ಆಶ್ಲೇ ಜಾಕ್ಸನ್ ಗಳಿಸಿದ ಗೋಲ್ ನ ನೆರವಿನಿಂದಾಗಿ, ಆತಿಥೇಯ ರಾಂಚಿ ತಂಡ, ದಬಾಂಗ್ ಮುಂಬೈ ವಿರುದ್ಧ ಎಚ್‍ಐಎಲ್ ಪಂದ್ಯದಲ್ಲಿ 2-2 ಗೋಲುಗಳ ಡ್ರಾ ಸಾಧಿಸಿ, ಸೋಲು ತಪ್ಪಿಸಿಕೊಂಡಿತು.

ಪಂದ್ಯದ 12ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಮುಂಬೈ ತಂಡ, ಆತಿಥೇಯರಿಗೆ 1-0 ಗೋಲುಗಳ ಅಂತರದ ಸವಾಲೊಡ್ಡಿತು. ಈ ಗೋಲು ಗಳಿಸಿದ್ದು ಗ್ಲೆನ್ ಟರ್ನರ್. ಇದಾದ ಮೇಲೆ, ಎದುರಾಳಿ ತಂಡದ ಸಂತಾ ಸಿಂಗ್ ಅವರು 15ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಆತಿಥೇಯರಿಗೆ ಸವಾಲೊಡ್ಡಿದರು. ಮುಂಬೈ ತಂಡ ಗಳಿಸಿದ 2-0 ಗೋಲುಗಳ ಮುನ್ನಡೆಯನ್ನು ಬೆನ್ನಟ್ಟಿದ ರಾಂಚಿ ತಂಡಕ್ಕೆ ಚೊಚ್ಚಲ ಮಂದಹಾಸ ತಂದುಕೊಟ್ಟಿದ್ದು ಡೇನಿಯಲ್ ಬೇಲ್. 16ನೇ ನಿಮಿಷದಲ್ಲಿ ಅವರು ಗಳಿಸಿದ ಗೋಲ್‍ನಿಂದಾಗಿ ರಾಂಚಿ ತಂಡ, ಮುಂಬೈ ತಂಡದೊಂದಿಗೆ ಹೊಂದಿದ್ದ ಗೋಲುಗಳ ಅಂತರವನ್ನು 1-2ಕ್ಕೆ ತಗ್ಗಿಸಿಕೊಂಡಿತು.

ಏತನ್ಮಧ್ಯೆ, ಪಂದ್ಯದ ಮೊದಲಾರ್ಧ ಮುಗಿಯುವ ಮುನ್ನ ಗೋಲು ದಾಖಲಿಸುವ ಅವಕಾಶಗಳನ್ನು ರಾಂಚಿ ಕೈಚೆಲ್ಲಿತು. ಇನ್ನು, ಪಂದ್ಯ ಅಂತಿಮ ಹಂತಕ್ಕೆ ಸಾಗುತ್ತಿದ್ದರೂ ರಾಂಚಿ ತಂಡದಿಂದ ಯಾವುದೇ ಗೋಲು ದಾಖಲಾಗದಿರುವುದು ತವರಿನ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, 38ನೇ ನಿಮಿಷದಲ್ಲಿ ರಾಂಚಿ ತಂಡದ ನಾಯಕ ಆಶ್ಲೆ ಜಾಕ್ಸನ್ ತಂಡಕ್ಕೆ ನೆರವಾದರು.

38ನೇ ನಿಮಿಷದಲ್ಲಿ ಅವರು ಗಳಿಸಿಕೊಟ್ಟ ಗೋಲು ತಂಡವನ್ನು ಸೋಲಿನಿಂದ ಪಾರು ಮಾಡಿದರು. ಮ್ಯಾಥ್ಯೂ ಸ್ವಾನ್ ಕೈಬಿಟ್ಟ ಮುಂಬೈ ಸ್ನಾಯು ಸೆಳೆತದಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ಆಟಗಾರ ಮ್ಯಾಥ್ಯೂ ಸ್ವಾನ್ ಅವರನ್ನು ದಬಾಂಗ್ ಮುಂಬೈ ತಂಡ ಕೈಬಿಟ್ಟಿದೆ. ಈ ಬಾರಿಯ ಎಚ್‍ಐಎಲ್ ಪಂದ್ಯಾವಳಿಗಾಗಿ ಅವರನ್ನು ಮುಂಬೈ ತಂಡ ಖರೀದಿಸಿತ್ತು. ಆದರೆ, ಪಂದ್ಯಾವಳಿಗೆ ಆರಂಭಕ್ಕೂ ಮುನ್ನ ಅವರು ಮೀನುಖಂಡದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಪಂದ್ಯಾವಳಿ ಹಿನ್ನೆಲೆಯಲ್ಲಿ, ಅವರು ಭಾರತಕ್ಕೆ ಬಂದು ತಂಡವನ್ನು ಸೇರಿಕೊಂಡರಾದರೂ ಅವರ ನೋವು ಉಪಶಮನವಾಗಿರಲಿಲ್ಲ. ಹಾಗಾಗಿ, ಅವರು ಎಚ್‍ಐಎಲ್‍ನಲ್ಲಿ ಒಂದೂ ಪಂದ್ಯವನ್ನಾಡಿರಲಿಲ್ಲ. ನೋವು ಹೆಚ್ಚಾದ ಕಾರಣ, ಅವರು ಚಿಕಿತ್ಸೆಗಾಗಿ ಬುಧವಾರ ಸ್ವದೇಶಕ್ಕೆ ಮರಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!