ಪರ್ತ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ತಲುಪುವ ಭಾರತದ ಕನಸು ನುಚ್ಚುನೂರಾಗಿದೆ.
ಪರ್ತ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಸೋಲುವ ಮೂಲಕ ಭಾರತ ಸರಣಿಯಿಂದ ಹೊರಬಂದಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಕೇವಲ 200 ರನ್‌ಗಳಿಸಲಷ್ಟೇ ಶಕ್ತವಾಯಿತು. ಸುಲಭ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ಸಹ ಆರಂಭದಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.
ಆದರೆ ಉತ್ತಮವಾಗಿ ಬ್ಯಾಟ್ ಬೀಸಿದ ಜೇಮ್ಸ್ ಟೇಲರ್(82) ರನ್ ಮತ್ತು ಜೋಸ್ ಬಟ್ಲರ್ 67 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಸೋಲಿನ ಸುಳಿಯಿಂದ ಪಾರು ಮಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದು, ಫೈನಲ್ ಪ್ರವೇಶಿಸಿದ್ದಾರೆ. ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸೆಣೆಸಾಡಲಿವೆ.
ಇಂಗ್ಲೆಂಡ್ ಪರ ಇಯಾನ್ ಬೆಲ್ 10, ಅಲಿ 17, ರೂಟ್ 3, ಮೊರ್ಗನ್ 2, ರವಿ ಬೋಪರ 4 ರನ್ ಗಳಿಸಿದರು.
ಭಾರತ ಪರ ಸ್ಟುವರ್ಟ್ ಬಿನ್ನಿ 3, ಶರ್ಮಾ 2 ಮೊಹಮ್ಮದ್ ಶಮಿ ಹಾಗೂ ಅಕ್ಷರ ಪಟೇಲ್ ತಲಾ 1 ವಿಕೆಟ್ ಪಡೆದಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕರಾದ ರೆಹಾನೆ ಮತ್ತು ಧವನ್ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಅವರಿಬ್ಬರು ಮುರಿಯದ ಮೊದಲ ವಿಕೆಟ್ ಗೆ ಭರ್ಜರಿ 81 ರನ್‌ಗಳ ಜೊತೆಯಾಟವಾಡಿದ್ದರು. ತಂಡದಲ್ಲಿ ಏಕಮಾತ್ರರಾಗಿ ಭರ್ಜರಿ ಆಟವಾಡಿದ ರೆಹಾನೆ ಗರಿಷ್ಠ 73 ರನ್ ಗಳಿಸಿ ಔಟಾದರೆ, ಧವನ್ 38 ರನ್‌ಗಳಿಸಿ ಔಟಾದರು.
ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕೊಹ್ಲಿ 8 ರನ್‌ಗೆ ಔಟಾದರೆ, ರೈನಾ 1 ,ನಾಯಕ ಧೋನಿ 17 ,ರಾಯುಡು 12 . ಬಿನ್ನಿ 7 ಜಡೇಜಾ 5 ಅಕ್ಷರ್ ಪಟೇಲ್ 1 ರನ್‌ಗಳಿಸಿ ಔಟಾದರು.
ಕೊನೆಯ ವಿಕೆಟ್‌ಗೆ ಭರ್ಜರಿ ಆಟವಾಡಿದ ಶಮಿ ಭರ್ಜರಿ 25 ರನ್ ಸಿಡಿಸಿ ತಂಡ 200 ಕ್ಕೆ ಬರುವಲ್ಲಿ ಅತ್ಯಮೂಲ್ಯ ಕೊಡುಗೆ ಸಲ್ಲಿಸಿದರು. ಮೊಹಿತ್ ಶರ್ಮಾ ಔಟಾಗದೆ 7 ರನ್ ಗಳಿಸಿದರು.
ಇಂಗ್ಲೆಂಡ್ ಪರ ಫಿನ್ 3 ವಿಕೆಟ್ ,ಮೊಮಿನ್ ಅಲಿ , ಬ್ರಾಡ್ ಮತ್ತು ವೋಕ್ಸ್ ತಲಾ 2 ವಿಕೆಟ್ ಪಡೆದರೆ,ಆಂಡರ್‌ಸನ್ 1 ವಿಕೆಟ್ ಪಡೆದರು.