ಬೆಂಗಳೂರು: 2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ಪೂರ್ವಭಾವಿಯಾಗಿ ನಡೆಯಲಿರುವ ಎರಡು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾರತ ತಂಡ ಆಡಲಿದೆ.
ಜೂ. 11ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಇದರಲ್ಲಿ ಒಮನ್ ವಿರುದ್ಧ ಭಾರತ ಸೆಣಸಲಿದೆ. ಜೂ. 16ರಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಗುವಾಮ್ ವಿರುದ್ಧ ಭಾರತ
ಮುಖಾಮುಖಿಯಾಗಲಿದೆ ಎಂದು ಭಾರತೀಯ ಫುಟ್ಬಾಲ್ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ. ಮೊದಲ ಪಂದ್ಯ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದರೆ, ಎರಡನೇ ಪಂದ್ಯ ಗವಾಮ್ ನ
ತವರಲ್ಲೇ ನಡೆಯಲಿದೆ.
ಡಾ. ರಾಜ್ ಕಪ್ ಫಲಿತಾಂಶ ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ `ಡಾ. ರಾಜ್‍ಕುಮಾರ್ ಸ್ಮಾರಕ ಕಪ್-2015' ಪಂದ್ಯಾವಳಿಯಲ್ಲಿ ಮಂಡ್ಯ ಹಾಗೂ
ಕೊಡಗು ತಂಡಗಳು ಸೆಮಿಭಫೈನಲ್‍ಗೆ ಪ್ರವೇಶ ಪಡೆದಿವೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಂಡ್ಯ, ಶಿವಮೊಗ್ಗ ತಂಡವನ್ನು 1-0 ಗೋಲುಗಳ ಅಂತರದಲ್ಲಿ
ಪರಾಭವಗೊಳಿಸಿದರೆ, ಕೊಡಗು ಹಾಗೂ ಮೈಸೂರು ತಂಡಗಳ ನಡುವೆ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯ ಡ್ರಾ ಆಯಿತು. ಆದರೂ, ಅಂಕಗಳ ಆಧಾರದ ಮೇಲೆ ಕೊಡಗು
ಸೆಮಿಫೈನಲ್ ಪ್ರವೇಶಿಸಿತು.
ಗುರುವಾರ ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ, ನಮ್ಮ ಬೆಂಗಳೂರು ಹಾಗೂ ಬಿಎಫ್ ಸಿ ತಂಡಗಳು ಉಪಾಂತ್ಯದ ಸುತ್ತು ಪ್ರವೇಶಿಸಿದ್ದವು. ಶನಿವಾರ ನಡೆಯಲಿರುವ ಸೆಮಿಫೈನಲ್
ಪಂದ್ಯಗಳಲ್ಲಿ ಮಂಡ್ಯ ತಂಡ, ನಮ್ಮ ಬೆಂಗಳೂರು ತಂಡವನ್ನು ಎದುರಿಸಲಿದ್ದು, ಕೊಡಗು ತಂಡ ಬಿಎಫ್ ಸಿ ತಂಡವನ್ನು ಎದುರಿಸಲಿದೆ.