ಫ್ರೆಂಚ್ ಓಪನ್ ಡಬಲ್ಸ್ ಪ್ರಶಸ್ತಿ ವಿಜೇತ ಜೋಡಿ 
ಕ್ರೀಡೆ

ಫ್ರೆಂಚ್ ಓಪನ್: ಡಬಲ್ಸ್ ಫೈನಲ್ ನಲ್ಲಿ ಬ್ರಯಾನ್ ಸೋದರರಿಗೆ ಸೋಲು

ಫ್ರೆಂಚ್ ಓಪನ್ ಡಬಲ್ಸ್ ಫೈನಲ್ಸ್ ನಲ್ಲಿ ಅಮೆರಿಕದ ಖ್ಯಾತ ಬ್ರಯಾನ್ ಸಹೋದರರು ಸೋಲು ಕಂಡಿದ್ದು, ಕ್ರೊವೇಶಿಯಾದ ಇವಾನ್ ಡೊಡಿಗ್ ಹಾಗೂ ಬ್ರೆಜಿಲ್‌ನ ಮಾರ್ಸೆಲೊಮೆಲೊ ಅವರು...

ಪ್ಯಾರಿಸ್: ಫ್ರೆಂಚ್ ಓಪನ್ ಡಬಲ್ಸ್ ಫೈನಲ್ಸ್ ನಲ್ಲಿ ಅಮೆರಿಕದ ಖ್ಯಾತ ಬ್ರಯಾನ್ ಸಹೋದರರು ಸೋಲು ಕಂಡಿದ್ದು, ಕ್ರೊವೇಶಿಯಾದ ಇವಾನ್ ಡೊಡಿಗ್ ಹಾಗೂ ಬ್ರೆಜಿಲ್‌ನ ಮಾರ್ಸೆಲೊಮೆಲೊ ಅವರು ಮೊದಲ ಬಾರಿಗೆ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ಯಾರಿಸ್ ನ ರೋಲ್ಯಾಂಡ್ ಗ್ಯಾರೋಸ್ ಕೋರ್ಟ್‌ನಲ್ಲಿ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ಫೈನಲ್ ನಲ್ಲಿ ಅಮೆರಿಕದ ಖ್ಯಾತ ಬಾಬ್ ಬ್ರಯಾನ್ ಹಾಗೂ ಮೈಕ್ ಬ್ರಯಾನ್ ಸಹೋದರರನ್ನು 6-7(5) 7-6(5) 7-5 ಗಳ ಮೂರು ಸೆಟ್‌ನಿಂದ ಸೋಲಿಸಿದ ಡೊಡಿಗ್ ಹಾಗೂ ಮೆಲೊ ಅವರು ಮೊದಲ ಬಾರಿಗೆ ಡಬಲ್ಸ್ ವಿಭಾಗದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಅದ್ಭುತ ಪೈಪೋಟಿ ನೀಡಿದ್ದ ಬ್ರಯಾನ್ ಬ್ರದರ್ಸ್ ಪಂದ್ಯದ ಒಂದು ಹಂತದಲ್ಲಿ ತಾವೇ ಪ್ರಶಸ್ತಿ ಪಡೆಯುವ ಆಸೆಯನ್ನು ಅಮೆರಿಕ ಅಭಿಮಾನಿಗಳಲ್ಲಿ ಮೂಡಿಸಿದ್ದರು. ಆದರೆ ಕೊನೆಕ್ಷಣದಲ್ಲಿ ಅದ್ಭುತ ಪ್ರದರ್ಶನ ನೀಡಿದ ಡೊಡಿಗ್ ಮೈಕ್ ಜೋಡಿ ಬ್ರಯಾನ್ ಸಹೋದರರಿಗೆ ಸೋಲಿನ ರುಚಿ ತೋರಿಸುವ ಮೂಲಕ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಕ್ರೊವೇಶಿಯಾದ ಇವಾನ್ ಡೊಡಿಗ್ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್‌ನಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದು, ಮೆಲೊ ಅವರು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆದ್ದ ಬ್ರೆಜಿಲ್‌ನ ಎರಡನೇ ಆಟಗಾರರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT