ಬೋಪಣ್ಣ-ಮರ್ಜಿಯಾ ಜೋಡಿ 
ಕ್ರೀಡೆ

ಬೋಪಣ್ಣ ಜೋಡಿ ಚಾಂಪಿಯನ್

ಭಾರತದ ಹಿರಿಯ ಟೆನಿಸಿಗ ರೋಹನ್ ಬೋಪಣ್ಣ ಹಾಗೂ ಅವರ ಜೊತೆಗಾರ,ರೊಮೇನಿಯಾದ ಫ್ಲೊರಿನ್ ಮರ್ಜಿಯಾ, ಸ್ಟುಟ್ ಗರ್ಟ್ ಓಪನ್ ಟೆನಿಸ್ ಚಾಂಪಿಯನ್ ಶಿಪ್ ನ ಪುರುಷರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ...

ಸ್ಟಟ್ ಗರ್ಟ್: ಭಾರತದ ಹಿರಿಯ ಟೆನಿಸಿಗ  ರೋಹನ್ ಬೋಪಣ್ಣ  ಹಾಗೂ ಅವರ  ಜೊತೆಗಾರ,ರೊಮೇನಿಯಾದ ಫ್ಲೊರಿನ್  ಮರ್ಜಿಯಾ, ಸ್ಟುಟ್ ಗರ್ಟ್ ಓಪನ್ ಟೆನಿಸ್  ಚಾಂಪಿಯನ್ ಶಿಪ್ ನ ಪುರುಷರ ಡಬಲ್ಸ್ ವಿಭಾಗದಲ್ಲಿ  ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ರೋಹನ್-ಮರ್ಜಿಯಾ ಜೋಡಿ, 4ನೇ ಶ್ರೇಯಾಂಕಿತ ಜೋಡಿಯಾದ ಆಸ್ಟ್ರೇಲಿಯಾ-ಬ್ರೆಜಿಲ್ ನ  ಜೋಡಿಯಾದ ಅಲೆಕ್ಸಾಂಡರ್  ಪೆಯಾ ಹಾಗೂ ಬ್ರುನೊ ಸೋರ್ಸ್  ಅವರನ್ನು  5-7,6-2 ಹಾಗೂ 10-7 ಸೆಟ್ ಗಳ ಅಂತರದಲ್ಲಿ  ಪ್ರಶಸ್ತಿಗೆ ಭಾಜನವಾಯಿತಲ್ಲದೆ, ಸುಮಾರು 4 ಕೋಟಿ  15 ಲಕ್ಷ ಮೊತ್ತದ  ಬಹುಮಾನವನ್ನು ತನ್ನದಾಗಿಸಿಕೊಂಡಿತು.

ಎರಡು ಜೋಡಿಗಳ ನಡುವಿನ ಮೊದಲ ಸೆಟ್ ನಲ್ಲಿ ಬೋಪಣ್ಣ-ಮರ್ಜಿಯಾ ಜೋಡಿ ಸೋಲು ಕಂಡಿತು. ಆದರೆ, ಎರಡನೇ ಸೆಟ್ ನಲ್ಲಿ ಪ್ರತಿರೋಧ  ತೋರಿದ ಭಾರತ-ರೊಮೇನಿಯಾ ಜೋಡಿ , ತೀವ್ರ  ಹೋರಾಟ ನೀಡಿತು. ಎದುರಾಳಿಗಳಿಗೆ   ಒಂದೇ  ಒಂದು ಬ್ರೇಕ್ ಪಾಯಿಂಟ್ ನ ಅವಕಾಶವನ್ನೂ ನೀಡದೆ ಆಡಿದ ಈ  ಇಬ್ಬರು,  ತಮಗೆ ಸಿಕ್ಕಿದ ಮೂರು ಬ್ರೇಕ್ ಪಾಯಿಂಟ್  ಅವಕಾಶಗಳಲ್ಲಿ ಎರಡನ್ನು ಅಂಕಗಳನ್ನಾಗಿ ಪರಿವರ್ತಿಸಿ ಸೆಟ್  ಗೆಲ್ಲುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT