ಮಹೇಂದ್ರ ಸಿಂಗ್‌ ಧೋನಿ 
ಕ್ರೀಡೆ

ವಾಣಿಜ್ಯ ಹಿತಾಸಕ್ತಿ: ಎಂಎಸ್ ಧೋನಿ ಕುರಿತು ಬಿಸಿಸಿಐ ತನಿಖೆ ಆರಂಭ

ರಿತಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯೊಂದಿಗೆ ಎಂ ಎಸ್‌ ಧೋನಿ ಹೊಂದಿರುವ ವಿರೋಧಾತ್ಮಕ ಹಿತಾಸಕ್ತಿ ಕುರಿತಾಗಿ ಭಾರತದ ಕ್ರಿಕೆಟ್‌...

ನವದೆಹಲಿ: ರಿತಿ ಸ್ಪೋರ್ಟ್ಸ್  ಮ್ಯಾನೇಜ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯೊಂದಿಗೆ ಎಂ ಎಸ್‌ ಧೋನಿ ಹೊಂದಿರುವ ವಿರೋಧಾತ್ಮಕ ಹಿತಾಸಕ್ತಿ ಕುರಿತಾಗಿ ಭಾರತದ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ತನಿಖೆಯನ್ನು ಆರಂಭಿಸಿದೆ ಎಂದು ಬಿಸಿಸಿಐ ಅಧ್ಯಕ್ಷ ಜಗ್‌ಮೋಹನ್‌ ದಾಲ್ಮಿಯಾ ಸ್ಪಷ್ಟಪಡಿಸಿದ್ದಾರೆ.

ಮಹೇಂದ್ರ ಸಿಂಗ್‌ ಧೋನಿ ಸೇರಿದಂತೆ ಸುರೇಶ್‌ ರೈನಾ ಮತ್ತು ರವೀಂದ್ರ ಜಡೇಜ ಅವರ ವಾಣಿಜ್ಯ ಹಿತಾಸಕ್ತಿಗಳನ್ನು ಕೂಡ ರಿತಿ ಸ್ಫೋರ್ಟ್ಸ್ ಸಂಸ್ಥೆ ನಿರ್ವಹಿಸುತ್ತಿದೆ. ರಿತಿ  ಸ್ಪೋರ್ಟ್ಸ್  ಸಂಸ್ಥೆಯ ಮಾಲೀಕತ್ವ ಹಾಗೂ ನಿರ್ವಹಣೆ ಧೋನಿ ಅವರ ಸ್ನೇಹಿತ ಅರುಣ್‌ ಪಾಂಡೆ ಅವರ ಕೈಯಲ್ಲಿದ್ದು, ಧೋನಿ ಅವರ ವಿರೋಧಾತ್ಮಕ ವಾಣಿಜ್ಯ ಹಿತಾಸಕ್ತಿ ಕುರಿತಾಗಿ ಸಮಿತಿಯು ವರದಿ ಸಲ್ಲಿಸಿದ ಬಳಿಕವೇ ನಾವು ಆ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಲು ಸಾಧ್ಯ ಎಂದು ಬಿಸಿಸಿಐ ಅಧ್ಯಕ್ಷ ಹೇಳಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಶೇ.15 ಒಡೆತನವನ್ನು ರಿತಿ ಸ್ಫೋರ್ಟ್ಸ್ ಹೊಂದಿರುವುದು ಕೆಲವು ವರ್ಷಗಳ ಹಿಂದೆ ಭಾರೀ ವಿವಾದವನ್ನು ಸೃಷ್ಟಿಸಿತ್ತು. ಈ ಕಂಪೆನಿಯು ಸಿಎಸ್‌ಕೆ ತಂಡದ ಮಾರ್ಕೆಟಿಂಗ್‌ ವ್ಯವಹಾರ ಚಟುವಟಿಕೆಗಳನ್ನು ಕೂಡ ನಿರ್ವಹಿಸುತ್ತಿದೆ.

ರಿತಿ  ಸ್ಪೋರ್ಟ್ಸ್  ಕಂಪೆನಿ ಕುರಿತಾದ ವಿವಾದ ಸ್ಫೋಟಗೊಂಡಿದ್ದ 2013ರ ಎಪ್ರಿಲ್‌ನಲ್ಲಿ ಪಾಂಡೇ ಅವರು ಪತ್ರಿಕಾ ಪ್ರಕಟನೆಯೊಂದನ್ನು ಹೊರಡಿಸಿ ಧೋನಿ ಅವರು ರಿತಿ  ಕಂಪೆನಿಯಲ್ಲಿ ಯಾವುದೇ ಶೇರು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಅಮಾಯಕ ಜೀವ ಬಲಿಯಾಗುತ್ತಿವೆ, ಇದು ಸಂಪೂರ್ಣ ಅಸಮರ್ಥನೀಯ’; ಹಡಗು, ನಾವಿಕರ ಮೇಲಿನ ದಾಳಿ ಖಂಡಿಸಿದ EAM Jaishankar

'ಭಯೋತ್ಪಾದಕ ದೇಶ ಕೂಡ ಪ್ರಶ್ನೆ ಕೇಳುತ್ತಿದೆ': ಪಾಕ್ ಪತ್ರಕರ್ತನ ಬೆವರಿಳಿಸಿದ ಎಸ್ ಜೈಶಂಕರ್! Video

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

Asian Games 2026: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೂರು ಪದಕ; ಬರಾನಿಕಾ ಎಲಂಗೋವನ್‌ ಐತಿಹಾಸಿಕ ಸಾಧನೆ

ಆಪರೇಷನ್ ಸಿಂಧೂರ್ ಎಫೆಕ್ಟ್: ಬ್ರಹ್ಮೋಸ್ ಕ್ಷಿಪಣಿ ಅಂದಾಕ್ಷಣ ಪಾಕಿಸ್ತಾನ ನಡುಗುತ್ತದೆ; ಗೃಹ ಸಚಿವ ಅಮಿತ್ ಶಾ