ಢಾಕಾ: ಭಾರತ–ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಕೇವಲ 200 ರನ್‌ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಬ್ಯಾಟ್ ಮಾಡಿದ ಭಾರತ ತಂಡ ಬಾಂಗ್ಲಾದ ಮುಸ್ತಫಿಜುರ್ ರಹಮಾನ್ ರ ಮಾರಕ ದಾಳಿಗೆ ತತ್ತರಿಸಿದ್ದು, 200 ರನ್ ಗಳಿಗೆ ಆಲೌಟ್ ಆಗಿದೆ. ಇದೇ ವೇಳೆ ಕಡಿಮೆ ರನ್ ಗಳಿಸಿರುವ ಭಾರತ ಎರಡನೇ ಪಂದ್ಯದಲ್ಲೂ ಸೋಲಿನ ಕಹಿ ಅನುಭವಿಸುವ ಭೀತಿ ಎದುರಾಗಿದೆ. ಮಳೆಯ ಅಡ್ಡಿ ಹಿನ್ನೆಲೆ ಪಂದ್ಯವನ್ನು 47 ಓವರ್ ಗಳಿಗೆ ಸೀಮಿತಗೊಳಿಸಲಾಗಿದೆ.
ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ 0, ಶಿಖರ್ ಧವನ್ 53, ವಿರಾಟ್ ಕೊಹ್ಲಿ 23, ನಾಯಕ ಮಹೇಂದ್ರ ಸಿಂಗ್ ದೋನಿ 47, ಅಂಬಟ್ಟಿ ರಾಯುಡು, 0, ಸುರೇಶ್ ರೈನಾ 34, ಅಕ್ಷರ ಪಟೇಲ್ 0, ಆರ್. ಅಶ್ವಿನ್ 4 ರನ್ ಗಳಿಗೆ ಔಟಾದರು.
ಮಳೆಯ ನಂತರ ರವೀಂದ್ರ ಜಡೇಜಾ 19, ಭುವನೇಶ್ವರ್ ಕುಮಾರ್ 3 ರನ್ ಗಳಿಸಿ ಔಟಾದರೇ, ಕುಲಕರ್ಣಿ ಅಜೇಯ 2 ರನ್ ಗಳಿಸಿದ್ದಾರೆ.
ಬಾಂಗ್ಲಾ ಪರ ಮುಸ್ತಫಿಜುರ್ ರಹಮಾನ್ 6 ವಿಕೆಟ್, ನಾಸೀರ್ ಹುಸೈನ್ 2, ರುಬೇಲ್ ಹುಸೈನ್ 2 ವಿಕೆಟ್ ಗಳಿಸಿದ್ದಾರೆ.