ಜಾನ್ಸನ್ ಚಾರ್ಲ್ಸ್ 
ಕ್ರೀಡೆ

ಬ್ರಾವೊ ಸ್ಥಾನಕ್ಕೆ ಚಾರ್ಲ್ಸ್

ಪರ್ತ್: ಸ್ನಾಯುಸೆಳೆತದಿಂದ ಬಳುತ್ತಿರುವ ಕಾರಣ ವಿಶ್ವಕಪ್‍ನಿಂದಲೇ ಹೊರಗುಳಿಯಬೇಕಾದ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಡಾರೆನ್ ಬ್ರಾವೊ ಸ್ಥಾನಕ್ಕೆ ಜಾನ್ಸನ್ ಚಾರ್ಲ್ಸ್ ಗೆ ಅವಕಾಶ ನೀಡಲಾಗಿದೆ. ಈ ಬದಲಾವಣೆಗೆ ಐಸಿಸಿ ಸಮ್ಮತಿ ಸೂಚಿಸಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಡಾರೆನ್ ಬ್ರಾವೊ ಒಂದು ರನ್ ಕದಿಯುವ ಪ್ರಯತ್ನದಲ್ಲಿ ನೆಲಕ್ಕುರುಳಿ ಗಾಯಗೊಂಡಿದ್ದರು. ಅವರು ಮತ್ತೆ ಆಡುವುದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ವಿಶ್ವಕಪ್‍ನಿಂದ ಅರ್ಧಕ್ಕೆ ತವರಿಗೆ ಹಿಂತಿರುಗಬೇಕಾಗಿದೆ.

ಅವರ ಬದಲಿಗೆ ವಿಂಡೀಸ್ ಆಯ್ಕೆದಾರರು ಚಾರ್ಲ್ಸ್ ಹೆಸರು ಸೂಚಿಸಿತ್ತು. ಈಗ ಚಾಲ್ರ್ಸ್ ವೆಸ್ಟ್ ಇಂಡೀಸ್ ತಂಡವನ್ನು ಕೂಡಿಕೊಂಡಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಚಾರ್ಲ್ಸ್ 2014ರ ಮಾರ್ಚ್‍ನಲ್ಲಿ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ್ದರು.

ಒಬ್ಬ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಆಗಿರುವ ಅವರು 30 ಏಕದಿನ ಪಂದ್ಯಗಳಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕ ಒಳಗೊಂಡಂತೆ 28.96ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಆದರೆ ದೇಶಿ ಲೀಗ್‍ನಲ್ಲಿ ಅವರು ಅದ್ಭುತ ಸಾಮರ್ಥ್ಯ ತೋರಿದ್ದಾರೆ. ನಾಲ್ಕು ದಿನಗಳ ಪ್ರಾದೇಶಿಕ ಟೂರ್ನಿಯಲ್ಲಿ ಚಾರ್ಲ್ಸ್, ಬಾರ್ಬಡಾಸ್ ವಿರುದ್ಧ ಕೇವಲ 124 ಎಸೆತಗಳಲ್ಲಿ 177 ರನ್ ಸಿಡಿಸಿದ್ದು ಗಮನಾರ್ಹವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT