ಕ್ರೀಡೆ

ರಾಜ್ಯ ಫುಟ್ಬಾಲ್ ಆಟಗಾರರ ಸಂಘ ಅಸ್ತಿತ್ವಕ್ಕೆ

Mainashree

ಬೆಂಗಳೂರು: ಫುಟ್ಬಾಲ್ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿರುವ ಯುವಕ-ಯುವತಿಯರಿಗೆ ಸೂಕ್ತ ತರಬೇತಿ ನೀಡುವ ಸದುದ್ದೇಶದೊಂದಿಗೆ ರಾಜ್ಯದಲ್ಲಿ ನೂತನವಾಗಿ ಕರ್ನಾಟಕ ಫುಟ್ಬಾಲ್ ಆಟಗಾರರ ಸಂಘ ಆಸ್ತಿತ್ವಕ್ಕೆ ಬಂದಿದೆ.

ಸೋಮವಾರ ನಗರದ ಕರ್ನಾಟಕ ಬಿಲಿಯರ್ಡ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ನೂತನ ಸಂಘಟನೆಗೆ ಪ್ರಚಾರ ರಾಯಭಾರಿಯೂ ಆಗಿರುವ ನಟ ಪುನೀತ್ ರಾಜ್‌ಕುಮಾರ್ ಚಾಲನೆ ನೀಡಿದರು.

ಬಾಲ್ಯದಿಂದಲೂ ಫುಟ್ಬಾಲ್ ಅಂದ್ರೆ ತುಂಬಾ ಇಷ್ಟ. ತೀರಾ ಇತ್ತೀಚಿನವರೆಗೆ ಫುಟ್ಬಾಲ್ ಆಟವನ್ನು ವಿಶ್ವಕಪ್ ಪಂದ್ಯಾವಳಿ ಶುರುವಾದಾಗ ಟಿವಿಗಳಲ್ಲಿ ನೋಡಿ ಖುಷಿ ಪಡುತ್ತಿದ್ದೆ. ಇತರೆ ಆಟಗಳ ಹಾಗೆ ಫುಟ್ಬಾಲ್ ಜನಪ್ರಿಯತೆ ಪಡೆದಿರುವುದು ಸಂತಸ ಮೂಡಿಸಿದೆ ಎಂದು ಪುನೀತ್. ಬೆಂಗಳೂರಿನ ಟ್ಯಾನರಿ ರಸ್ತೆ, ಫ್ರೇಜರ್ ಟೌನ್, ಗೋವಿಂದಪುರಗಳಲ್ಲಿ ಪುಟ್ಬಾಲ್ ಮನೆ ಮಾತು.

ಈ ರೀತಿ ರಾಜ್ಯದ ಎಲ್ಲ ಕಡೆ ಫುಟ್ಬಾಲ್ ಪ್ರೀತಿ ಹೆಚ್ಚಾಗಬೇಕು. ಯುವಕರು ಈ ಕ್ರೀಡೆಗೆ ಹೆಚ್ಚಾಗಿ ಬರಬೇಕಿದೆ. ಅವರಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂದರು.

ಸಂಘದ ಅಧ್ಯಕ್ಷ ರತನ್ ಸಿಂಗ್ ಮಾತನಾಡಿ, ಸಂಸ್ಥೆಯ ಮೂಲಕ ರಾಜ್ಯ, ರಾಷ್ಟ್ರಕ್ಕೆ ಅತ್ಯುತ್ತಮ ಫುಟ್ಬಾಲ್ ಕ್ರೀಡಾಪಟುಗಳನ್ನು ನೀಡುವ ಉದ್ದೇಶ ಹೊಂದಿದ್ದೇವೆ. ಆರಂಭಿಕ ಹಂತದಲ್ಲಿ 8 ವರ್ಷ ಮೇಲ್ಬಟ್ಟ ಮಕ್ಕಳಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ ಂದರು. ಸಂಘವು ವರನಟ ಡಾ.ರಾಜ್‌ಕುಮಾರ್ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಕ್ರೀಡಾಂಗಣವನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡುವ ಯೋಜನೆ ಹೊಂದಿದೆ.

ಇದಕ್ಕೆ ಸರ್ಕಾರ ಮತ್ತು ದಾನಿಗಳ ನೆರವು ಪಡೆಯಲಾಗುತ್ತದೆ. ಡಾ. ರಾಜ್ ಹೆಸರಿನಲ್ಲಿ ಪ್ರತಿ ವರ್ಷ ಫುಟ್ಬಾಲ್ ಲೀಗ್ ಪಂದ್ಯ ಆಯೋಜಿಸುವ ಚಿಂತನೆಯಿಂದ ಎಂದರು. ಅಖಿಲ ಭಾರತ ಫುಟ್ಬಾಲ್ ಆಟಗಾರರ ಸಂಘದ ವ್ಯವಸ್ಥಾಪಕ ಸೈರಸ್, ಸಂಘದ ನೂತನ ಪದಾಧಿಕಾರಿಗಳಾದ ಕಾರ್ಲ್ಟನ್ ಚಾಂಪಮೆನ್, ವೆಂಕಟೇಶ್ ಷಣ್ಮುಗಂ, ಡಾ. ಗ್ಯಾಂಬೆಟ್ ಡಿ. ಕಾಸ್ಟಾ, ಜಗದೀಶ್ ಕುಮಾರು, ಮಸ್ತಾನ್, ಅಣ್ಣಪ್ಪ, ಪೀಟರ್ ಪುಷ್ಪರಾಜ್ ಹಾಜರಿದ್ದರು. ಇದೇ ವೇಳೆ, ಅಂತಾರಾಷ್ಟ್ರೀಯ ಫುಟ್ಬಾಲ್ ಕ್ರೀಡಾಪುಟುಗಳಾದ ಅರುಮೈ ನಾಯಗಂ, ಇಲಿಯಾಸ್ ಪಾಷಾ ಅವರನ್ನು ಸನ್ಮಾನಿಸಲಾಯಿತು.

SCROLL FOR NEXT