ನವದೆಹಲಿ: ಭಾರತದ ಪತ್ರಕರ್ತರೊಬ್ಬರನ್ನು ದೂಷಿಸಿದ ಭಾರತ ಕ್ರಿಕೆಟ್ ತಂಡದ ಉಪ ನಾಯಕ ವಿರಾಟ್ ಕೊಹ್ಲಿ ಅವರಿಗೆ ಬಿಸಿಸಿಐ ಕಟು ಎಚ್ಚರಿಕೆ ನೀಡಿದೆ.
ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವಂತೆ ಬಿಸಿಸಿಐ ಎಚ್ಚರಿಸಿದೆ. ಮಂಗಳವಾರ ನಡೆದ ತರಬೇತಿ ಶಿಬಿರದ ನಂತರ ತಮ್ಮ ಸಹನೆ ಕಳೆದುಕೊಂಡ ಕೊಹ್ಲಿ ಪತ್ರಕರ್ತರೊಬ್ಬರಿಗೆ ಕಟುವಾಗಿ ನಿಂದಿಸಿದ್ದರು.
ಈ ಕುರಿತು ಆ ವರದಿಗಾರ ಕೆಲಸ ಮಾಡುವ ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ಐಸಿಸಿ ಮತ್ತು ಬಿಸಿಸಿಐಗೆ ದೂರು ನೀಡಿದೆ. ಮಂಡಳಿಯ ಕಾರ್ಯದರ್ಶಿ ಅನುರಾಗ್ ಠಾಕುರ್ ಇದೊಂದು ತಪ್ಪು ಭಾವನೆಯಿಂದ ಉಂಟಾದ ಪ್ರಕರಣವೆಂದೂ ತಂಡ ವಿಶ್ವಕಪ್ ಮೇಲೆ ಗಮನಹರಿಸಲು ಈ ವಿಷಯವನ್ನು ಅಲ್ಲಿಗೇ ಬಿಡಬೇಕೆಂದು ಹೇಳಿದ ಬಳಿಕ ಬಿಸಿಸಿಐ ಎಚ್ಚರಿಕೆ ಹೊರಬಿದ್ದಿದೆ.