ಪರ್ತ್: ಭಾರತ ಪ್ರಭಾವಿ ಬೌಲಿಂಗ್ ಎದುರು ವಿಂಡೀಸ್ ತಂಡದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ದು, ಕೇವಲ 182 ರನ್ ಗಳಿಗೇ ಆಲ್ ಔಟ್ ಆಗಿದ್ದಾರೆ.
ಪರ್ತ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ನಾಯಕ ಹೋಲ್ಡರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಭಾರತ ಪ್ರಭಾವಿ ಬೌಲಿಂಗ್ ಎದುರು ವಿಂಡೀಸ್ ದಾಂಡಿಗರು ಮಂಕಾಗಿದ್ದು, ಪೆವಿಲಿಯನ್ ಪರೇಡ್ ನಡೆಸಿದರು. ಭಾರತೀಯ ಬೌಲರ್ ಗಳ ಪ್ರಭಾವಿ ಬೌಲಿಂಗ್ ನಿಂದಾಗಿ ವಿಂಡೀಸ್ ನ ಆರಂಭಿಕ ಬ್ಯಾಟ್ಸ್ ಮನ್ ಗಳಾದ ದೈತ್ಯ ಕ್ರಿಸ್ ಗೇಯ್ಲ್ ಮತ್ತು ಡ್ವೇನ್ ಸ್ಮಿತ್ ರನ್ ಗಳಿಸಲು ಪರದಾಡಿದರು. ತಂಡ 8 ರನ್ ಗಳಿಸಿದ್ದ ವೇಳೆ ಸ್ಮಿತ್ ಅವರು ಶಮಿ ಎಸೆದ ವನ್ನು ಧೋನಿ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಸ್ಯಾಮುಯೆಲ್ಸ್ 2 ರನ್ ಗಳಿಸಿದ್ದ ವೇಳೆ ರನೌಟ್‌ಗೆ ಬಲಿಯಾದರು. ಆಗಷ್ಟೇ ಅಬ್ಬರಿಸಲು ಆರಂಭಿಸಿದ್ದ ಗೇಲ್ 21 ರನ್‌ಗಳಿಸಿದ್ದ ವೇಳೆ ಶಮಿ ಎಸೆದ ಎಸೆತವನ್ನು ತಪ್ಪಾಗಿ ಸಿಕ್ಸರ್ ಭಾರಿಸಲು ಹೋಗಿ ಮೋಹಿತ್ ಶರ್ಮಾಗೆ ಕ್ಯಾಚಿತ್ತು ನಿರ್ಗಮಿಸಿದರು. ಗೇಲ್ ನಿರ್ಗಮಿಸಿದ ಬೆನ್ನಲ್ಲೇ ದಿನೇಶ್ ರಾಮ್‌ದೀನ್ ಅವರನ್ನು ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಮಾಡಿದರು.
ಆ ಬಳಿಕ ಸಿಮಾನ್ಸ್ 9 ರನ್ ಗಳಿಸಿ ಶರ್ಮಾ ಎಸೆತದಲ್ಲಿ ಯಾದವ್ ಅವರಿಗೆ ಕ್ಯಾಚಿತ್ತರು. ಬಳಿಕ ಕಾರ್ಟರ್ ಕೂಡ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ ಆರ್ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು. ರಸೆಲ್ ಮತ್ತು ಸಾಮಿ ಕೊಂಚ ಪ್ರತಿರೋಧ
ಒಡ್ಡಿದರಾದರೂ ತಂಡದ ಮೊತ್ತ 85 ರನ್ ಗಳಿದ್ದಾಗ ರಸೆಲ್ ಜಡೇಜಾ ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನು ಸಾಮಿ ಕೂಡ 26 ರನ್ ಗಳಿಸಿ ಶಮಿ ಬೌಲಿಂಗ್ ನಲ್ಲಿ ಧೋನಿಗೆ ಕ್ಯಾಚಿತ್ತು ಹೊರನಡೆದರು. ಬಳಿಕ ಬಂದ ಟೇಲರ್ ಮತ್ತು ನಾಯಕ ಹೋಲ್ಡರ್ ಜೋಡಿ ಭಾರತೀಯ ಬೌಲರ್ ಗಳನ್ನು ಕೆಲಹೊತ್ತು ಕಾಡಿದರು. ಈ ನಡುವೆ ನಾಯಕ ಟೇಲರ್ ಜವಾಬ್ದಾರಿಯುತ ಆಟ ಪ್ರದರ್ಶಿಸಿ ಅರ್ಧಶತಕ ಸಿಡಿಸಿದರು. ತಂಡದ ಮೊತ್ತ 175 ರನ್ ಗಳಾಗಿದ್ದಾಗ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಟೇಲರ್ ಕ್ಯಾಚಿತ್ತು ಔಟ್ ಆದರು. ಬಳಿಕ ಹೋಲ್ಡರ್ ಕೂಡ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೇ ಜಡೇಜಾ ಬೌಲಿಂಗ್ ನಲ್ಲಿ ನಿರ್ಗಮಿಸಿದರು.
ಒಟ್ಟಾರೆ ವಿಂಡೀಸ್ ತಂಡ 44.2 ಓವರ್ ಗಳಲ್ಲಿ 182 ರನ್ ಗಳಿಗೇ ಆಲ್ ಔಟ್ ಆಯಿತು.