ಬೆಂಗಳೂರು: ಮಿಡ್ ಫೀಲ್ಡರ್ ಜೊಶುವಾ ವಾಕರ್ ದಾಖಲಿಸಿದ ಪೆನಾಲ್ಟಿ ಗೋಲ್‍ನ ಸಹಾಯದಿಂದ ಆತಿಥೇಯ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ, ಸಿಂಗಾಪುರ ಮೂಲದ ವಾರಿಯರ್ಸ್ ಎಫ್ ಸಿ ವಿರುದ್ಧ ನಡೆದ ಎಎಫ್ ಸಿ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ 1-0 ಗೋಲುಗಳ ಅಂತರದ ಜಯ ದಾಖಲಿಸಿತು.
ಈ ಮೂಲಕ ಟೂರ್ನಿಯಲ್ಲಿ ಬೆಂಗಳೂರು ತಂಡ ಎರಡನೇ ಗೆಲವು ದಾಖಲಿಸಿತು. ಇದೇ ಟೂರ್ನಿಯಲ್ಲಿ ಇಂಡೊನೇಷ್ಯಾದ ಪರ್ಸಿಪುರ ಜಯಪುರ ತಂಡದ ವಿರುದಟಛಿ ಸೋತಿದ್ದ ಬೆಂಗಳೂರು ಎಫ್ ಸಿ, ಮಾಲ್ಡೀವ್ಸ್ ಮೂಲದ ಮಾಝಿಯಾ ತಂಡದ ವಿರುದ್ಧ ಸೋಲು ಕಂಡಿತ್ತು. ಇದೀಗ, ವಾರಿಯರ್ಸ್ ಎಫ್ ಸಿ ವಿರುದ್ಧ ಜಯ ಸಾಧಿಸಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭದಿಂದಲೂ ಇತ್ತಂಡಗಳ ತೀವ್ರ ಪೈಪೋಟಿಯು ಪ್ರೇಕ್ಷಕರಲ್ಲಿ ಪುಟ್ಬಾಲ್ ಕ್ರೀಡೆಯ ಮುದ ನೀಡಿತು. ಆದರೆ, ಪಂದ್ಯದ 36ನೇ ನಿಮಿಷದಲ್ಲಿ ತಮಗೆ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶದ ಸದುಪಯೋಗ ಪಡಿಸಿಕೊಂಡ ಬೆಂಗಳೂರು ಎಫ್ ಸಿ ತಂಡ, ಗೋಲು ಗಳಿಸಿ ಎದುರಾಳಿಗಳಿಗಿಂತ 1-0ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಈ ಗೋಲು ಗಳಿಸಿದ್ದು, ಜೋಶುವಾಕರ್. ಈ ಮೂಲಕ ಅವರು ತಂಡಕ್ಕೆ ಗೋಲ್ ಮಂದಹಾಸ ತಂದಿತ್ತರು.
ಅತ್ತ, ವಾರಿಯರ್ಸ್ ತಂಡ ಸ್ಪೈಕರ್ ವೆಲೆಝ್ ಮೇಲೆ ಹೆಚ್ಚು ಅವಲಂಬಿತವಾದಂತೆ ಕಂಡುಬಂದಿತ್ತು. ಅಲ್ಲದೆ, ಗೋಲು ಗಳಿಸಲು ತಮಗೆ ಒದಗಿ ಬಂದಿದ್ದ ಹಲವಾರು ಅವಕಾಶಗಳನ್ನು ವಾರಿಯರ್ಸ್ ತಂಡ ಕೈಚೆಲ್ಲಿದ್ದು ಆ ತಂಡಕ್ಕೆ ಮುಳುವಾಯಿತು. ಅತ್ತ, ಎದುರಾಳಿಗಳಿಗೆ ತೀವ್ರ ಪೈಪೋಟಿ ನೀಡಿದ ಆತಿಥೇಯರು, ಪ್ರತಿ ಹಂತದಲ್ಲಿಯೂ ವಾರಿಯರ್ಸ್ ನ ತಂತ್ರಗಾರಿಕೆ ಸೆಡ್ಡು ಹೊಡೆದರು. ಒಟ್ಟಾರೆಯಾಗಿ, ಪ್ರಮುಖ ಆಟಗಾರರಾದ ಸುನಿಲ್ ಚೆಟ್ರಿ, ರಾಬಿನ್ ಸಿಂಗ್ ಹಾಗೂ ಯುಗೆನೆಸನ್ ಲಿಂಗ್ಡೊ ಅನುಪಸ್ಥಿತಿಯಲ್ಲೇ ಪಂದ್ಯ ಗೆದ್ದಿರುವುದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.