ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಸೋಲು: ಅನುಷ್ಕಾ ವಿರುದ್ಧ ಟ್ವಿಟರ್ ನಲ್ಲಿ ಅಸಮಾಧಾನ

ವಿಶ್ವಕಪ್ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ತಂಡ ಸೋಲು ಕಾಣುವುದಕ್ಕೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ..

ಪಂದ್ಯ ವೀಕ್ಷಣೆ ಮಾಡುತ್ತಿರುವ ಅನುಷ್ಕಾ
Srinivasa Murthy VN
Updated On : 26 Mar 2015, 7:26 am

ಮುಂಬೈ: ವಿಶ್ವಕಪ್ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ತಂಡ ಸೋಲು ಕಾಣುವುದಕ್ಕೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೇ ಕಾರಣ ಎಂದು ಕೆಲ ಕ್ರಿಕೆಟ್ ಪ್ರೇಮಿಗಳು ಆರೋಪಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್‌ ಸೆಮಿ ಫೈನಲ್‌ ಪಂದ್ಯದಲ್ಲಿ ಭಾರತ ತಂಡದ ಹೀನಾಯ ಸೋಲು ಭಾರತೀಯ ಕ್ರಿಕೆಟ್‌ ಪ್ರೇಮಿಗಳಿಗೆ ಅತೀವವಾದ ನೋವು, ನಿರಾಶೆ, ಸಿಟ್ಟಿಗೆ ಕಾರಣವಾಗಿದೆ. ಭಾರತೀಯ ಬ್ಯಾಟ್ಸಮನ್‌ಗಳ ಪೈಕಿ ಪ್ರಮುಖವಾಗಿ ವಿರಾಟ್ ಕೊಹ್ಲಿ ಮತ್ತು ಗೆಳತಿ ಆನುಷ್ಕಾ ಶರ್ಮಾ ವಿರುದ್ಧ ಕ್ರೀಡಾ ಪ್ರೇಮಿಗಳು ಟ್ವಿಟರ್ ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಉತ್ತಮ ಫಾರ್ಮ್ ನಲ್ಲಿದ್ದರೂ ಕೇವಲ 1 ರನ್‌ ಹೊಡೆದು ಔಟಾಗಿರುವ ವಿರಾಟ್‌ ಕೊಹ್ಲಿ ವೈಫಲ್ಯಕ್ಕೆ ಅನುಷ್ಕಾ ಶರ್ಮಾ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುಷ್ಕಾ ಕ್ರೀಡಾಂಗಣಕ್ಕೆ ಆಗಮಿಸಿದ್ದರಿಂದ ಕೊಹ್ಲಿ ಕ್ರಿಕೆಟ್ ಮರೆತರು. ಹೀಗಾಗಿ ಬೇಗನೇ ಪಿವಿಲಿಯನ್ ಸೇರಿಕೊಂಡ ಪರಿಣಾಮ ಭಾರತ ಹೀನಾಯವಾಗಿ ಸೋತಿದೆ ಎಂದು ಕೆಲವು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು  ಅನುಷ್ಕಾ ಕುಳಿತಿದ್ದರಿಂದಲೇ ವಿರಾಟ್ ಕೊಹ್ಲಿ ಗಮನ ಆತನ ಆಟದ ಕಡೆಗೆ ಹೋಗಲಿಲ್ಲ. ಬದಲಿಗೆ ಅನುಷ್ಕಾಳತ್ತಲೇ ವಾಲಿದ್ದರಿಂದ ಆತ ಕೇವಲ 1 ರನ್‌ಗೆ ಔಟಾಗಿ ಪೆವಿಲಿಯನ್‌ಗೆ ಮರಳಿದ ಎಂದು ಟ್ವಿಟರ್‌ನಲ್ಲಿ ಹಲವು ಮಂದಿ ಲೇವಡಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement