ಕೊಹ್ಲಿ ಮತ್ತು ಅನುಷ್ಕಾ 
ಕ್ರೀಡೆ

ವಿಶ್ವಕಪ್ ಸೋಲು: ಭಾರತಕ್ಕೆ ಮರಳಿದ ಕೊಹ್ಲಿ-ಅನುಷ್ಕಾ

ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಸೋಲಿನ ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತಕ್ಕೆ ವಾಪಸ್ ಆಗಿದ್ದಾರೆ...

ನವದೆಹಲಿ: ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಸೋಲಿನ ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತಕ್ಕೆ ವಾಪಸ್ ಆಗಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಸೆಮಿಫೈನಲ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ, ನಟಿ ಅನುಷ್ಕಾ ಶರ್ಮಾ ಅವರೇ ಕಾರಣ ಎಂಬ ಟೀಕೆ ಕೇಳಿಬಂದಿತ್ತು. ಆದರೆ ಇಂತಹ ಆರೋಪಗಳಿಗೆ ವಿರಾಟ್‌ ಕೊಹ್ಲಿ ಮಾತ್ರ ಯಾವುದೇ ರೀತಿಯ ಸೊಪ್ಪು ಹಾಕಿಲ್ಲ. ಅಲ್ಲದೆ ತಮ್ಮ ಗೆಳತಿಯ ಕೈ ಹಿಡಿದು ಆಗಮಿಸುವುದರೊಂದಿಗೆ ಆಕೆಯೊಂದಿಗೆ ತಾವಿದ್ದೇವೆ ಎಂದು ಸಾರಿದ್ದಾರೆ.

ವಿಶ್ವಕಪ್‌ ಟೂರ್ನಿ ಬಳಿಕ ಭಾರತೀಯ ಆಟಗಾರರು, ಶುಕ್ರವಾರ ರಾತ್ರಿ ತವರಿಗೆ ಆಗಮಿಸಿದ್ದು, ಈ ವೇಳೆ ವಿರಾಟ್‌ ಕೊಹ್ಲಿ, ಮುಂಬೈ ವಿಮಾನ ನಿಲ್ದಾಣದಲ್ಲಿ ಗೆಳತಿ ಅನುಷ್ಕಾ ಶರ್ಮಾ ಕೈಹಿಡಿದುಕೊಂಡೇ ಹೊರಬಂದಿದ್ದಾರೆ. ಇದು ಎಲ್ಲರ ಗಮನ ಸೆಳೆಯಿತು. ಇಬ್ಬರ ನಡುವಿನ ಪ್ರೀತಿ-ಪ್ರೇಮ ವಿಚಾರ ಈಗಾಗಲೇ ಬಹಿರಂಗವಾಗಿದ್ದರೂ, ಇಬ್ಬರೂ ಭಾರತದಲ್ಲಿ ಪರಸ್ಪರ ಕೈ ಕೈ ಹಿಡಿದು ಇಷ್ಟು ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!