ಧೋನಿಗೆ 1000 ರು. ಚೆಕ್ ಕಳುಹಿಸಿದ ಐಜಿ ಠಾಕೂರ್ 
ಕ್ರೀಡೆ

ವಿಶ್ವಕಪ್ ಸೆಮಿಸ್ ಸೋಲು: ಧೋನಿಗೆ 1000 ರು. ಚೆಕ್ ಕಳುಹಿಸಿದ ಐಜಿ ಠಾಕೂರ್!

ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 95 ರನ್ ಗಳ ಅಂತರದಿಂದ ಟೀಂ ಇಂಡಿಯಾ ಸೋತ ನಂತರ ಕ್ರಿಕೆಟ್ ಅಭಿಮಾನಿಗಳ...

ಲಖನೌ: ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 95 ರನ್ ಗಳ ಅಂತರದಿಂದ ಟೀಂ ಇಂಡಿಯಾ ಸೋತ ನಂತರ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಎಲ್ಲೆ ಮೀರಿತ್ತು. ಟಿವಿಗಳನ್ನು ಹೊಡೆದು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಏತನ್ಮಧ್ಯೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರಿಗೆ 1000 ರು. ಚೆಕ್ ಕಳಿಸಿ ಲೇವಡಿ ಮಾಡಿದ್ದಾರೆ.

ಧೋನಿಗೆ 1000 ರು. ಚೆಕ್ ಜೊತೆಗೆ ಪತ್ರವೊಂದನ್ನು ಕಳುಹಿಸಿರುವ ಉತ್ತರ ಪ್ರದೇಶದ ಐಜಿ ಅಮಿತಾಭ್ ಠಾಕೂರ್, ಸೆಮಿಫೈನಲ್ ನಲ್ಲಿ ಸೋಲುವ ಮೂಲಕ ಫೈನಲ್ ಪಂದ್ಯವನ್ನು ಭಾರತೀಯರು ವೀಕ್ಷಿಸಲು ಸಾಧ್ಯವಾಗದಂತೆ ಮಾಡಿರುವುದಕ್ಕೆ ಅಮಿತಾಭ್ ಠಾಕೂರ್ ಧೋನಿಯವರನ್ನು ಅಭಿನಂದಿಸಿದ್ದಾರೆ.


ಕ್ರಿಕೆಟನ್ನು ಕ್ರೀಡೆಯನ್ನು ಟೀಕಿಸುವ ಅಮಿತಾಬ್ ಠಾಕೂರ್ ವಿಶ್ವಕಪ್ ಆರಂಭವಾದ ಬಳಿಕ ಸಾರ್ವಜನಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮರೆತು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವುದರಲ್ಲೇ ತಲ್ಲೀನರಾಗಿದ್ದರು. ಈಗ ಭಾರತ ಸೋತಿರುವ ಕಾರಣ ಮತ್ತೆ ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆಂದು ಹೇಳಿದ್ದಾರೆ.


ಅಲ್ಲದೆ ತಂಡದ ಎಲ್ಲಾ ಆಟಗಾರರು ಈ ಕುರಿತು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಬೇಕೆಂಬ ಸಲಹೆ ನೀಡಿದ್ದಾರೆ. ಅಮಿತಾಭ್ ಠಾಕೂರ್ ಯಾವ ಕಾರಣಕ್ಕಾಗಿ ಚೆಕ್ ಹಾಗೂ ಪತ್ರ ಕಳುಹಿಸಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

SCROLL FOR NEXT