ನಂಬರ್ 1 ಆಟಗಾರರು 
ಕ್ರೀಡೆ

ಡಿವಿಲಿಯರ್ಸ್, ಸ್ಟಾರ್ಕ್, ದಿಲ್ಷಾನ್ ನಂ.1

ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿವಿಲಿಯರ್ಸ್, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್ ಅವರು...

ಮೆಲ್ಬರ್ನ್: ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿವಿಲಿಯರ್ಸ್, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್ ಅವರು ನೂತನ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಕ್ರಮವಾಗಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್‍ರೌಂಡರ್ ವಿಭಾಗದಲ್ಲಿ ನಂಬರ್ ಒನ್ ಸ್ಥಾನದ ಗೌರವ ಪಡೆದಿದ್ದಾರೆ.

ಆಸ್ಟ್ರೇಲಿಯಾ ತಂಡ ಐದನೇ ಬಾರಿಗೆ ವಿಶ್ವಕಪ್ ಗೆದ್ದುಕೊಳ್ಳಲು ಕಾರಣರಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಬೌಲಿಂಗ್‍ನಲ್ಲಿ ಅಭೂತಪೂರ್ವ ಕೈಚಳಕ ಪ್ರದರ್ಶಿಸಿಸಿ ಗಮನ ಸೆಳೆದಿದ್ದರು. ವಿಶ್ವಕಪ್ ಆರಂಭಕ್ಕೂ ಮುನ್ನ ರ್ಯಾಂಕಿಂಗ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದ ಸ್ಟಾರ್ಕ್, 10.18ರ ಸರಾಸರಿಯಲ್ಲಿ ಒಟ್ಟು 22 ವಿಕೆಟ್ ಉರುಳಿಸುವ ಮೂಲಕ ಮೊದಲ ಸ್ಥಾನಕ್ಕೇರಿದರು. ಐಸಿಸಿ ಮಂಗಳವಾರ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯ ಬ್ಯಾಟಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿವಿಲಿಯರ್ಸ್ ಮೊದಲ ಸ್ಥಾನದ ಗೌರವ ಪಡೆದಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತದ ಪರ ವಿರಾಟ್ ಕೊಹ್ಲಿ 4ನೇ ಸ್ಥಾನದ ಗೌರವ ಕಾಯ್ದುಕೊಂಡಿದ್ದರೆ, ಶಿಖರ್ ಧವನ್ (6ನೇ) ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ (8ನೇ) ಅಗ್ರ ಹತ್ತರೊಳಗೆ ಸ್ಥಾನ ಪಡೆದಿರುವ ಇತರೆ ದಾಂಡಿಗರಾಗಿದ್ದಾರೆ. ಉಳಿದಂತೆ ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ (3ನೇ) ಮತ್ತು ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್ (5ನೇ) ಅವರು ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ಐದರೊಳಗೆ ಸ್ಥಾನ ಹೊಂದಿರುವ ಆಟಗಾರರಾಗಿದ್ದಾರೆ. ಆದರೆ, ಬೌಲಿಂಗ್ ವಿಭಾಗದಲ್ಲಿ ಭಾರತದ ಯಾವೊಬ್ಬ ದಾಳಿಕಾರನೂ ಅಗ್ರ ಹತ್ತರಲ್ಲಿ ಸ್ಥಾನ ಹೊಂದಿಲ್ಲ. ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮಧ್ಯಮ ವೇಗಿ ಮೊಹಮ್ಮದ್ ಶಮಿ 11ನೇ ಸ್ಥಾನದಲ್ಲಿರುವುದೇ ಭಾರತದ ಪರ ಉತ್ತಮ ಸಾಧನೆಯಾಗಿದೆ. ಇನ್ನು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 14ನೇ ಮತ್ತು ಮಧ್ಯಮ ವೇಗಿ ಉಮೇಶ್ ಯಾದವ್ 18ನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ.

ಆಲ್‍ರೌಂಡರ್‍ಗಳ ಪಟ್ಟಿಯಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್ ಮೊದಲ ಸ್ಥಾನ ಗಳಿಸಿದ್ದಾರೆ. ಭಾರತದ ಪರ ರವೀಂದ್ರ ಜಡೇಜಾ 8ನೇ ಸ್ಥಾನದಲ್ಲಿದ್ದಾರೆ. ತಂಡದ ರ್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ.

ರ್ಯಾಂಕಿಂಗ್ ಪಟ್ಟಿ (ಅಗ್ರ 5)
ಎಬಿ ಡಿವಿಲಿಯರ್ಸ್, ದಕ್ಷಿಣ ಆಫ್ರಿಕಾ, (902 ಅಂಕಗಳು)
ಕುಮಾರ ಸಂಗಕ್ಕಾರ, ಶ್ರೀಲಂಕಾ, (860 ಅಂಕಗಳು)
ಹಶೀಂ ಅಮ್ಲಾ ದಕ್ಷಿಣ ಆಫ್ರಿಕಾ (828 ಅಂಕಗಳು)
ವಿರಾಟ್ ಕೊಹ್ಲಿ, ಭಾರತ, (822 ಅಂಕಗಳು)
ತಿಲಕರತ್ನೆ ದಿಲ್ಷಾನ್,  ಶ್ರೀಲಂಕಾ, (793 ಅಂಕಗಳು)
(ಭಾರತದ ಪರ ಶಿಖರ್ ಧವನ್-6ನೇ (756 ಅಂಕಗಳು), ಮಹೇಂದ್ರ ಸಿಂಗ್ ಧೋನಿ-8ನೇ (731) ಸ್ಥಾನ)

ಬೌಲಿಂಗ್ ವಿಭಾಗ (ಅಗ್ರ 5 ಸ್ಥಾನಗಳು)
ಆಟಗಾರ ದೇಶ ರೇಟಿಂಗ್
ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ 783
ಇಮ್ರಾನ್ ತಾಹಿರ್ ದಕ್ಷಿಣ ಆಫ್ರಿಕಾ 734
ಸಯೀದ್ ಅಜ್ಮಲ್ ಪಾಕಿಸ್ತಾನ 718
ಡೇಲ್ ಸ್ಟೇಯ್ನ್ ನ ದಕ್ಷಿಣ ಅಫ್ರಿಕಾ 717
ಸುನೀಲ್ ನಾರಾಯಣ್ ವೆಸ್ಟ್ ಇಂಡೀಸ್ 709

ತಂಡಗಳ ರ್ಯಾಂಕಿಂಗ್ (ಅಗ್ರ 10 ಸ್ಥಾನಗಳು)
ಆಸ್ಟ್ರೇಲಿಯಾ-122
ಭಾರತ- 116
ದಕ್ಷಿಣ ಆಫ್ರಿಕಾ-112
ನ್ಯೂಜಿಲೆಂಡ್-108
ಶ್ರೀಲಂಕಾ-107
ಇಂಗ್ಲೆಂಡ್-101
ಪಾಕಿಸ್ತಾನ-95
ವೆಸ್ಟ್ ಇಂಡೀಸ್- 92
ಬಾಂಗ್ಲಾದೇಶ- 76
ಜಿಂಬಾಬ್ವೆ- 50

ಆಲ್‍ರೌಂಡರ್ಸ್ (ಅಗ್ರ 5 ಸ್ಥಾನ)
ತಿಲಕರತ್ನೆ ದಿಲ್ಷಾನ್, ಶ್ರೀಲಂಕಾ, 404
ಶಕೀಬ್ ಅಲ್ ಹಸನ್, ಬಾಂಗ್ಲಾದೇಶ, 388
ಆ್ಯಂಜೆಲೊ ಮ್ಯಾಥ್ಯೂಸ್, ಶ್ರೀಲಂಕಾ, 378
ಮೊಹಮ್ಮದ್ ಹಫೀಜ್, ಪಾಕಿಸ್ತಾನ, 368
ಜೇಮ್ಸ್ ಫಾಲ್ಕನರ್, ಆಸ್ಟ್ರೇಲಿಯಾ, 361

ಭಾರತದ ಪರ ರವೀಂದ್ರ ಜಡೇಜಾ-8ನೇ ಸ್ಥಾನ(298ರೇಟಿಂಗ್)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: ಮುಂದಿನ ತಿಂಗಳು ಭಾರತಕ್ಕೆ ಬರಲಿದೆ S-400 ಕ್ಷಿಪಣಿ 4ನೇ ಘಟಕ!

ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ: ಹಣಕ್ಕಾಗಿ ಹೂತಿಟ್ಟ ಸಹೋದರಿ ಶವವನ್ನೇ ಬ್ಯಾಂಕ್​ಗೆ ಹೊತ್ತು ತಂದ ವ್ಯಕ್ತಿ!

Iran War: ಜಗತ್ತಿಗೆ ಶಾಕ್ ಕೊಟ್ಟ UAE, ತೈಲ ರಫ್ತು ಗುಂಪುಗಳಿಂದ ಏಕಾಏಕಿ ಹೊರಕ್ಕೆ! ಆಗಿದ್ದೇನು?

ಬೆಂಗಳೂರಿಗೆ ಕೊನೆಗೂ ತಂಪರೆದ ಮಳೆರಾಯ, ಮೇ 2ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಮೇ 15ಕ್ಕೆ ಡಿಕೆ ಶಿವಕುಮಾರ್ ಸಿಎಂ ಆಗೋದು ಗ್ಯಾರಂಟಿ: ಹೊಸ ಡೇಟ್ ಕೊಟ್ಟ ಶಾಸಕ ಇಕ್ಬಾಲ್ ಹುಸೇನ್!

SCROLL FOR NEXT