ಕ್ರೀಡೆ

ಮುಂಬೈ ಆಸೆ ಜೀವಂತ

ಮುಂಬೈ: ತೀವ್ರ ಕುತೂಹಲದಿಂದ ಕೂಡಿದ್ದ ಪಂದ್ಯದ ಅಂತಿಮ ಓವರ್ ಗಳಲ್ಲಿ ಶಿಸ್ತಿನ ದಾಳಿ ಸಂಘಟಿಸಿದ ಮುಂಬೈ ಇಂಡಿಯನ್ಸ್ ಬೌಲರ್‍ಗಳು ರಾಜಸ್ಥಾನ ರಾಯಲ್ಸ್ ವಿರುದ್ಧ ತಮ್ಮ ತಂಡ ಗೆಲವು ದಾಖಲಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಮುಂಬೈಗೆ ಪ್ಲೇ ಆಫ್ ಸುತ್ತಿನ ಆಸೆ ಜೀವಂತವಾಗುಳಿದಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಲಿಳಿದ ಮುಂಬೈ ಇಂಡಿಯನ್ಸ್ ತಂಡ ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 5 ವಿಕೆಟ್ ನಷ್ಠಕ್ಕೆ 187 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 179 ರನ್ ದಾಖಲಿಸಿತು. ಈ ಮೂಲಕ 8 ರನ್ ಗಳ ಸೋಲನುಭವಿಸಿತು.

ಪ್ಲೇ ಆಫ್ ಸುತ್ತಿಗೆ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಳ್ಳಲು ಗೆಲ್ಲಲೇಹಬೇಕಾದ ಅನಿವಾರ್ಯತೆಯಿಂದ ಕಣಕ್ಕಿಳಿದ ಮುಂಬೈ ಇಂಡಿಯನ್ಸ್, ಬ್ಯಾಟಿಂಗ್ ಹಾಗೂ ಬೌಲಿಂಗ ಎರಡೂ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿತು.

ಮುಂಬೈ ಇಂಡಿಯನ್ಸ್ ತಂಡದ ಪರ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 53 ರನ್ ದಾಖಲಿಸಿದ ಅಂಬಟಿ ರಾಯುಡು ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು. ಇನ್ನು ಪೊಲಾರ್ಡ್ 14 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 24 ರನ್ ದಾಖಲಿಸಿದರು. ರಾಜಸ್ತಾನ ತಂಡದ ಪರ ಕುಲಕರ್ಣಿ 2, ಸೌಧೀ, ಧೆರಾನ್ ಹಾಗೂ ಅಂಕಿತ್ ತಲಾ 1 ವಿಕೆಟ್ ಪಡೆದರು.

ಸವಾಲಿನ ಮೊತ್ತ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಸಂಜು ಸ್ಯಾಮ್ಸನ್ ಅವರ ಆಕರ್ಷಕ ಬ್ಯಾಟಿಂಗ್ ನಿಂದ ಗೆಲವಿನತ್ತ ಹೆಜ್ಜೆ ಹಾಕಿತ್ತು. ಆಧರೆ 18ನೇ ಓವರ್ ನಲ್ಲಿ ಸ್ಯಾಮ್ಸನ್ (76) ಹಾಗೂ ಕರುಣ್ ನಾಯರ್ (7) ವಿಕೆಟ್ ಪಡೆದ ಮೆಕ್ಲೆನ್ ಘಾನ್ ಪಂದ್ಯದ ದಿಕ್ಕು ಬದಲಿಸಿದರು. ಮುಂಬೈ ತಂಡದ ಪರ ಮೆಕ್ಲೆನ್ ಘಾನ್ 3, ವಿನಯ್ ಹಾಗೂ ಸುಚಿತ್ ತಲಾ 1 ವಿಕೆಟ್ ಪಡೆದರು.

SCROLL FOR NEXT