ಅಭಿನವ್ ಬಿಂದ್ರಾ 
ಕ್ರೀಡೆ

ಬಿಂದ್ರಾ, ಚೈನ್ ಸಿಂಗ್ ಗೆ ಸ್ವರ್ಣ ಡಬಲ್

ಹ್ಯಾನೋವರ್‍ ನಲ್ಲಿ ಭಾನುವಾರ ಮುಕ್ತಾಯವಾದ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಬಿsನವ್ ಬಿಂದ್ರಾ ಅವರು ಎರಡು ಚಿನ್ನದ..

ನವದೆಹಲಿ: ಹ್ಯಾನೋವರ್‍ ನಲ್ಲಿ ಭಾನುವಾರ ಮುಕ್ತಾಯವಾದ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಬಿsನವ್ ಬಿಂದ್ರಾ ಅವರು ಎರಡು ಚಿನ್ನದ ಪದಕಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತದ ಮತ್ತೊಬ್ಬ ಉದಯೋನ್ಮುಖ ಶೂಟರ್ ಚೈನ್ ಸಿಂಗ್ ಅವರೂ ಎರಡು ಚಿನ್ನದ ಪದಕ ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ವೈಯಕ್ತಿಕ ವಿಭಾಗದಲ್ಲಿ ಬಿಂದ್ರಾ ಅವರಿಗೆ ಮೊದಲ ಚಿನ್ನ ಬಂದರೆ, 10 ಮೀ. ಏರ್‍ರೈಫಲ್ ತಂಡಗಳ ವಿಭಾಗದಲ್ಲಿ ಬಿಂದ್ರಾ, ಚೈನ್ ಸಿಂಗ್ ಹಾಗೂ ಗಗನ್ ನಾರಂಗ್ ಅವರಿದ್ದ ತಂಡ ಚಿನ್ನದ ಗೌರವ ಪಡೆಯಿತು. ಪುರುಷರ 50 ಮೀ. ರೈಫಲ್ ಪ್ರೊನ್ ವಿಭಾಗದಲ್ಲಿ ಚೈನ್ ಸಿಂಗ್ ಅವರು ಮತ್ತೊಂದು ಚಿನ್ನದ ಗೌರವಕ್ಕೆ ಪಾತ್ರರಾದರು. ಪುರುಷರ 50 ಮೀ. ರೈಫಲ್ (3 ಪೊಸಿಷನ್) ವಿಭಾಗದಲ್ಲಿ ಗಗನ್ ನಾರಂಗ್ ಅವರು, ಕಂಚಿನ ಪದಕದ ಗೌರವ ಪಡೆದರೆ, ಕೊರಿಯಾದಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಯಶಸ್ಸು ಗಳಿಸಿದ್ದ ಅಪೂರ್ವಿ ಚಾಂಡೇಲಾ ಅವರು ಮಹಿಳೆಯರ ರೈಫಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್