ಮ್ಯೂನಿಚ್: ಜರ್ಮನಿಯ ಟೆನಿಸಿಗ ಹಾಗೂ ವಿಶ್ವದ 24ನೇ ಶ್ರೇಯಾಂಕಿತ ಫಿಲಿಪ್ ಕೋಲ್‍ಶ್ರೆಬರ್ ಅವರಿಂದ ತೀವ್ರ ಆಕ್ರಮಣದ ನಡುವೆಯೂ ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ಬ್ರಿಟನ್ ನ ಆ್ಯಂಡಿ ಮರ್ರೆ ಮೂನಿಚ್ ಓಪನ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು, ಜರ್ಮನಿಯ ಫಿಲಿಪ್ ಕೋಲ್ ಶ್ರೆಬರ್ ಅವರನ್ನು 7-6 (7-4) 5-7, 7-6, (7-4) ಸೆಟ್ ಗಳ ಅಂತರದಲ್ಲಿ ಮಣಿಸಿ, ಪ್ರಶಸ್ತಿಗೆ ಮುತ್ತಿಕ್ಕಿದರು. ಇದು ಅವರು ಗಳಿಸಿದ ಮೊಟ್ಟಮೊದಲ ಮಣ್ಣಿನ ಅಂಗಣದ ಪ್ರಶಸ್ತಿಯಾಗಿದೆಯಲ್ಲದೇ, ಅವರ ವೃತ್ತಿಜೀವನದ 32ನೇ ಎಟಿಪಿ ಚಾಂಪಿಯನ್ ಪಟ್ಟವು ಆಗಿದೆ. ಪಂದ್ಯಕ್ಕೂ ಮುನ್ನ ಮಳೆರಾಯ ಆಗಮಿಸಿದ್ದರಿಂದ, ಕೆಲಕಾಲ ಪಂದ್ಯ ಮುಂದೂಡಲ್ಪಟ್ಟಿತು. ಆನಂತರ ಆರಂಭವಾದ ಪಂದ್ಯದಲ್ಲಿ ಸುಮಾರು 3 ಗಂಟೆಗೂ ಅಧಿಕ ಕಾಲ ಸೆಣಸಿದ ವಿಶ್ವದ 3ನೇ ಶ್ರೇಯಾಂಕಿತ ಮರ್ರೆ, 24ನೇ ಶ್ರೇಯಾಂಕ ಪಡೆದ ಅಂತಿಮವಾಗಿ ಜಯದ ನಗೆ ಬೀರಿದರು.
ಎಣಿಸಿದಂತೆ, ಈ ಪಂದ್ಯ ಏಕಪಕ್ಷೀಯವಾಗಿರಲಿಲ್ಲ. ಪಂದ್ಯದ ಪ್ರತಿ ಹಂತದಲ್ಲೂ ಫಿಲಿಪ್ ಅವರು, ಮರ್ರೆಗೆ ಸೆಡ್ಡು ಹೊಡೆದರು. ಮೊದಲ ಸೆಟ್‍ನಲ್ಲಿ ಸಮಬಲ ಹೋರಾಟ ನೀಡಿದ್ದರಿಂದ ಈ ಸೆಟ್ ಟೈ ಬ್ರೇಕರ್‍ಗೆ ಬಂದು ನಿಂತಿತು. ಆದರೂ, ಇಲ್ಲಿ ಪ್ರಯಾಸದ ಜಯ ಕಂಡ ಮರ್ರೆಗೆ ದ್ವಿತೀಯ ಸೆಟ್‍ನಲ್ಲಿ ಅಪಾಯ ಎದುರಾಯಿತು. ಈ ಸೆಟ್‍ನಲ್ಲಿ ಅಕ್ಷರಶಃ ಮುಗಿಬಿದ್ದ ಫಿಲಿಪ್, ಜಯಭೇರಿ ಬಾರಿಸಿದರು. ಮೂರನೇ ಸೆಟ್‍ನಲ್ಲಿ ಇಬ್ಬರಿಂದ ಮತ್ತೆ ಸಮಬಲ ಹೋರಾಟ ಮೂಡಿಬಂತು. ಹಾಗಾಗಿ, ಈ ಸೆಟ್ ಸಹ ಟೈಬ್ರೇಕರ್‍ಗೆ ಬಂದು ನಿಂತಿತು. ಈ ಹಂತದಲ್ಲಿ, ಮಿಂಚಿನ ಆಟವಾಡಿದ ಮರ್ರೆ, ಈ ಸೆಟ್ ಗೆಲ್ಲುವುದರೊಂದಿಗೆ ಪಂದ್ಯದಲ್ಲೂ ಜಯಗಳಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ರೋಹನ್ ಜೋಡಿಗೆ ಗೆಲವು
ಮ್ಯಾಂಡ್ರಿಡ್: ಭಾರತದ ಹಿರಿಯ ಟೆನ್ನಿಸಿಗ ರೋಹನ್ ಬೋಪಣ್ಣ ಹಾಗೂ ರೊಮೇನಿಯಾದ ಫ್ಲೋರಿನ್ ಮೆರ್ಜಿಯಾ ಜೋಡಿ, ಮ್ಯಾಡ್ರಿಡ್ ಓಪನ್ ಟೆನ್ನಿಸ್ ಟೂರ್ನಿ ದ್ವಿತೀಯ ಸುತ್ತು ಪ್ರವೇಶಿಸಿದೆ.
ಮಂಗಳವಾರ ನಡೆದ ಪುರುಷರ ಡಬಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಈ ಜೋಡಿ, ಕ್ರೊವೇಶಿಯಾದ ಮಾರಿನ್ ಡ್ರಾಗಾನ್ಜಾ ಹಾಗೂ ಹೆನ್ರಿ ಕಾಂಟಿನೆನ್ ಜೋಡಿ ವಿರುದಟಛಿ 5-7, 7-6 (5), 10-6 ಸೆಟ್‍ಗಳ ಅಂತರದಲ್ಲಿ ಗೆಲವು ಪಡೆಯಿತು.