ಬಿಎಫ್ ಸಿಗೆ ಸೋಲು 
ಕ್ರೀಡೆ

ಬಿಎಫ್ ಸಿಗೆ ಸೋಲು

ಪ್ರಬಲ ಎದುರಾಳಿ ವಿರುದಟಛಿ ಹೋರಾಟದ ಪ್ರದರ್ಶನ ನೀಡಿದರೂ ಬೆಂಗಳೂರು ಎಫ್ ಸಿ ಏಷ್ಯನ್ ಫುಟ್ಬಾಲ್ ಕಾನೆ#ಡರೇಷನ್ ಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಪೆರ್ಸಿಪುರ ಜಯಪುರ ವಿರುದ್ಧ ಸೋಲನುಭವಿಸಿದೆ...

ಬೆಂಗಳೂರು: ಪ್ರಬಲ ಎದುರಾಳಿ ವಿರುದಟಛಿ ಹೋರಾಟದ ಪ್ರದರ್ಶನ ನೀಡಿದರೂ ಬೆಂಗಳೂರು ಎಫ್ ಸಿ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ ಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಪೆರ್ಸಿಪುರ ಜಯಪುರ ವಿರುದ್ಧ ಸೋಲನುಭವಿಸಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ 1-3 ಗೋಲುಗಳ ಅಂತರದಲ್ಲಿ ಇಂಡೋನೇಷ್ಯಾದ ಪೆರ್ಸಿಪುರ ಜಯಪುರ ವಿರುದ್ಧ ತಲೆಬಾಗಿದೆ. ಈ ಸೋಲಿನಿಂದ ಬಿಎಫ್ ಸಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯವನ್ನು ತವರಿನಲ್ಲಿ ಆಡುವ ಅವಕಾಶ ಕಳೆದುಕೊಂಡಿದೆ.

ಪಂದ್ಯದ ಆರಂಭದಿಂದ ಆತಿಥೇಯ ಬೆಂಗಳೂರು ಎಫ್ ಸಿ ನಿಯಂತ್ರಣ ಸಾಧಿಸಿತಾದರೂ ನಂತರದ ಹಂತದಲ್ಲಿ ಪೆರ್ಸಿಪುರ ತಂಡ ಪ್ರಭುತ್ವ ಸಾಧಿಸಿತು. ಎರಡೂ ತಂಡಗಳು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಪಂದ್ಯದ 18ನೇ ನಿಮಿಷದಲ್ಲಿ ಪೆರ್ಸಿಪುರ ಮೊದಲು ಗೋಲು ದಾಖಲಿಸುವ ಅವಕಾಶ ಪಡೆಯಿತಾದರೂ ಯಶಸ್ವಿಯಾಗಲಿಲ್ಲ. ಈ ವೇಳೆ ಚುರುಕಿನ ಆಟ ಪ್ರದರ್ಶಿಸಿದ ಬಿಎಫ್ ಸಿ 24ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮುನ್ನಡೆ ಪಡೆಯಿತು. ನಂತರ 29ನೇ ನಿಮಿಷದಲ್ಲಿ ಪೆರ್ಸಿಪುರ ತಂಡದ ಪರ
ಪುಗ್ಲಿಯಾರ ಗೋಲು ದಾಖಲಿಸಿ ತಂಡ ಹೋರಾಟ ನಡೆಸಲು ನೆರವಾದರು. ಈ ಮೂಲಕ ಉಭಯ ತಂಡಗಳು ಪಂದ್ಯದ ಮೊದಲಾರ್ಧದಲ್ಲಿ 1-1 ಗೋಲುಗಳ ಸಮಬಲ ಸಾಧಿಸಿದವು.

ಪಂದ್ಯದ ಎರಡನೇ ಹಂತದಲ್ಲಿ ಪೆರ್ಸಿಪುರ ತಂಡ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಈ ಹಂತದಲ್ಲಿ ಬೆಂಗಳೂರು ತಂಡ ಪ್ರವಾಸಿಗರ ಆಕ್ರಮಣಕಾರಿ ಆಟಕ್ಕೆ ತಡೆಯಾಗಿ ನಿಲ್ಲಲು ಸಾಕಷ್ಟು ಪ್ರಯತ್ನ ಮಾಡಿದರಾದರೂ ಯಶಸ್ವಿಯಾಗಲಿಲ್ಲ. 72ನೇ ನಿಮಿಷದಲ್ಲಿ ಪೆರ್ಸಿಪುರ ತಂಡದ ಪರ ವಾಂಘೈ ಅಕರ್ಷಕ ಪ್ರದರ್ಶನ ನೀಡಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಈ ವೇಳೆ ಹಿನ್ನಡೆ ಅನುಭವಿಸಿದ ಬಿಎಫ್ ಸಿ ಆಟಗಾರರ ಮೇಲೆ ಒತ್ತಡ ಹೆಚ್ಚಾಯಿತು. 77ನೇ ನಿಮಿಷದಲ್ಲಿ ಸೊಲೊಸ್ಸಾ ಮತ್ತೊಂದು ಗೋಲು ದಾಖಲಿಸಿದರು. ಬಿಎಫ್ ಸಿ ತಂಡದ ನಾಯಕ ಸುನೀಲ್ ಛೆಟ್ರಿ ಹಾಗೂ ಮತ್ತೊಬ್ಬ ಪ್ರಮುಖ ಸ್ಟ್ರೈಕರ್ ಯುಗೆನ್ಸನ್ ಲಿಂಗ್ಡೊ 79ನೇ ನಿಮಿಷದಲ್ಲಿ ಕಣಕ್ಕಿಳಿದಿದ್ದು, ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT