ಸೈನಾ ನೆಹ್ವಾಲ್ (ಸಂಗ್ರಹ ಚಿತ್ರ) 
ಕ್ರೀಡೆ

ಮತ್ತೆ ನಂಬರ್ 1 ಸ್ಥಾನಕ್ಕೇರಿದ ಸೈನಾ

ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಗುರುವಾರ ಮತ್ತೆ ನಂಬರ್ 1 ಸ್ಥಾನಕ್ಕೇರಿದ್ದಾರೆ.

ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಮತ್ತೆ ನಂಬರ್ 1 ಸ್ಥಾನಕ್ಕೇರಿದ್ದಾರೆ.

ಗುರುವಾರ ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ (Badminton World Federation-BWF) ಬಿಡುಗಡೆಗೊಳಿಸಿರುವ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸೈನಾ ನೆಹ್ವಾಲ್ ಅವರು ಮೊದಲ ಶ್ರೇಯಾಂಕ ಪಡೆದಿದ್ದಾರೆ. ಒಟ್ಟು 82342 ಅಂಕಗಳನ್ನು ಸಂಪಾದಿಸಿರುವ ಸೇನಾ ಚೀನಾದ ಲೀ ಕ್ಸೆರುಯಿ ಅವರನ್ನು ಹಿಂದಿಕ್ಕುವ ಮೂಲಕ ತಮ್ಮ ಸ್ಥಾನಕ್ಕೆ ಮರಳಿದ್ದಾರೆ. ಲೀ ಕ್ಸೆರುಯಿ ಅವರು 80764 ಅಂಕಗಳೊಂದಿಗೆ 2 ಸ್ಥಾನಕ್ಕೆ ಕುಸಿದಿದ್ದಾರೆ.

ಕಳೆದ ತಿಂಗಳು ಮೊಟ್ಟ ಮೊದಲ ಬಾರಿಗೆ ಸೈನಾ ಮೊದಲ ಸ್ಥಾನಕ್ಕೇರಿದ್ದರು. ಬಳಿಕ ನಡೆದ ಸರಣಿಯಲ್ಲಿ ಚೀನಾದ ಆಟಗಾರ್ತಿ ಲೀ ಕ್ಸೆರುಯಿ ಮೇಲುಗೈ ಸಾಧಿಸಿದ್ದರು. ಹೀಗಾಗಿ ಸೈನಾ ಅವರ ಮೊದಲ ಸ್ಥಾನ ಬಂದ ವೇಗದಲ್ಲಿಯೇ ಕ್ಸೆರುಯಿ ಅವರ ಪಾಲಾಗಿತ್ತು. ಒಲಿಂಪಿಕ್ ಕೂಟದ ಕಂಚಿನ ಪದಕ ವಿಜೇತೆಯಾದ ಸೈನಾ ಮೇ 26ರಂದು ಪ್ರಾರಂಭಗೊಳ್ಳಲಿರುವ ಆಸ್ಟ್ರೇಲಿಯಾ ಓಪನ್ ಸರಣಿಗೂ ಮೊದಲೇ ಮತ್ತೆ ತಮ್ಮ ಅಗ್ರ ಶ್ರೇಯಾಂಕವನ್ನು ಗಳಿಸಿಕೊಂಡಿರುವುದು ಅವರ ಆತ್ಮ ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ.

ಈ ಮಧ್ಯೆ ಭಾರತದ ಮತ್ತೋರ್ವ ಪ್ರತಿಭಾವಂತ ಆಟಗಾರ್ತಿ ಪಿ.ವಿ. ಸಿಂಧು ಅವರು ತಮ್ಮ ಸ್ಥಾನವನ್ನು ಕಳೆದುಕೊಂಡು 12ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಪುರುಷರ ಸಿಂಗಲ್ಸ್​ನಲ್ಲಿ ಕೆ. ಶ್ರೀಕಾಂತ್ ತಮ್ಮ 4ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಪಿ. ಕಶ್ಯಪ್ ಮತ್ತು ಎಚ್.ಎಸ್. ಪರ್ಣೋಯ್ ಕ್ರಮವಾಗಿ 13 ಮತ್ತು 15ನೇ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT