ಐಪಿಎಲ್ ನಲ್ಲಿ ನಟಿ ಪ್ರೀತಿ ಜಿಂಟಾ ಮತ್ತು ನಟ ಶಾರುಖ್ ಖಾನ್ 
ಕ್ರೀಡೆ

ಭದ್ರತಾ ಸಂಹಿತೆ ಉಲ್ಲಂಘನೆ: ಭ್ರಷ್ಟಾಚಾರ ನಿಗ್ರಹ ದಳ ಕೆಂಗಣ್ಣು

ಬಿಸಿಸಿಐನ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ನಿಗ್ರಹ ದಳದ ಎಚ್ಚರಿಕೆಯ ನಡುವೆಯೂ ಕೆಲವೊಂದು ಐಪಿಎಲ್ ತಂಡಗಳ ಮಾಲೀಕರು ತಮ್ಮ ತಂಡಗಳ ಆಟಗಾರರಿಗಾಗಿ...

ಮುಂಬೈ: ಬಿಸಿಸಿಐನ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ನಿಗ್ರಹ ದಳದ ಎಚ್ಚರಿಕೆಯ ನಡುವೆಯೂ ಕೆಲವೊಂದು ಐಪಿಎಲ್ ತಂಡಗಳ ಮಾಲೀಕರು ತಮ್ಮ ತಂಡಗಳ ಆಟಗಾರರಿಗಾಗಿ ಏರ್ಪಡಿಸುವ ಪಾರ್ಟಿಗಳಲ್ಲಿ ಅನಧಿಕೃತವಾಗಿ ಕೆಲವು ವ್ಯಕ್ತಿಗಳು ಭಾಗಿಯಾಗುತ್ತಿರುವುದನ್ನು ಪತ್ತೆಹಚ್ಚಲಾಗಿದೆ.

ಇತ್ತೀಚೆಗೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರಿಗಾಗಿ ಏರ್ಪಡಿಸಿದ್ದ ಪಾರ್ಟಿಯೊಂದರಲ್ಲಿ ತಂಡದ ಮಾಲೀಕರಾದ ಪ್ರೀತಿ ಜಿಂಟಾ ಅವರ ಸ್ನೇಹಿತೆ ಎಂದು ಹೇಳಲಾದ ಹುಡುಗಿಯೊಬ್ಬಳು ಪಾಲ್ಗೊಂಡಿದ್ದಳು. ಅಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ಆಟಗಾರನೊಬ್ಬನೊಂದಿಗೆ ಯುವತಿಯೊಬ್ಬಳು ಇಡೀ ರಾತ್ರಿ ಆತನ ಜೊತೆ ಹೋಟೆಲ್ ರೂಂನಲ್ಲಿ ಉಳಿದಿದ್ದಾಳೆ.

ಕೋಲ್ಕತಾ ನೈಟ್‍ರೈಡರ್ಸ್ ತಂಡದ ಆಟಗಾರರಿಗಾಗಿ ಏರ್ಪಡಿಸಲಾಗಿದ್ದ ಪಾರ್ಟಿಯಲ್ಲೂ ಕೆಕೆಆರ್ ಫ್ರಾಂಚೈಸಿ ಮಾಲೀಕ ಶಾರೂಖ್ ಖಾನ್ ಅವರ ಸಂಬಂಧಿಗಳೆಂದು ಹೇಳಿಕೊಂಡ
ಕೆಲವರು ಭಾಗಿಯಾಗಿರುವುದು ಈಗ ನಿಗ್ರಹ ದಳದ ಕಣ್ಣು ಕೆಂಪಾಗಿಸಿದೆ. ಈ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಅದು, ಈ ಬಗ್ಗೆ ಫ್ರಾಂಚೈಸಿಗಳಿಗೆ ಸ್ಪಷ್ಟನೆ ಕೋರಿದೆ. ಆದರೆ, ಫ್ರಾಂಚೈಸಿಗಳು ಈ ಆರೋಪಗಳನ್ನು ಸುತರಾಂ ಒಪ್ಪಿಕೊಂಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!