ಗಡಾಫಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು 
ಕ್ರೀಡೆ

ಬೀಭತ್ಸ ನಾಡಿನಲ್ಲಿ ಉತ್ಸಾಹದ ರಂಗು

ಬಿರುಬೇಸಿಗೆಯಲ್ಲಿ ಮಡಿಲಲ್ಲಿರುವ ಪಾಕಿಸ್ತಾನದಲ್ಲಿ ಈಗ ಎಲ್ಲೆಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಜಿಂಬಾಬ್ವೆ ತಂಡ ಇದೀಗ ಪಾಕಿಸ್ತಾನದಲ್ಲಿ ಸರಣಿ ಆಡುವ...

ಲಾಹೋರ್: ಬಿರುಬೇಸಿಗೆಯಲ್ಲಿ ಮಡಿಲಲ್ಲಿರುವ ಪಾಕಿಸ್ತಾನದಲ್ಲಿ ಈಗ ಎಲ್ಲೆಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಜಿಂಬಾಬ್ವೆ ತಂಡ ಇದೀಗ ಪಾಕಿಸ್ತಾನದಲ್ಲಿ ಸರಣಿ ಆಡುವ ಮೂಲಕ ತಮ್ಮ ದೇಶಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಿ ಕಾಲಿಟ್ಟಿದ್ದಕ್ಕೆ ಇಡೀ ಪಾಕಿಸ್ತಾನವೇ ಸಂಭ್ರಮದಲ್ಲಿ ಮುಳುಗಿದೆ.

ಎಲ್ಲೆಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಈ ಉತ್ಸಾಹದಿಂದ ರೋಮಾಂಚನಗೊಂಡಿರುವ ಕ್ರಿಕೆಟ್ ಅಭಿಮಾನಿಗಳು, ಟಿಕೆಟ್‍ಗಳಿಗಾಗಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲೂ ಗಡಾಫಿ ಕ್ರೀಡಾಂಗಣದ ಸುತ್ತಲೂ ಗಿರಕಿಹೊಡೆಯುತ್ತಿದ್ದಾರೆ. ಕ್ರೀಡಾಂಗಣದ ಸುತ್ತಲೂ ಜನಜಾತ್ರೆ ನಿರ್ಮಾಣವಾಗಿದೆ. 2009ರಲ್ಲಿ ಶ್ರೀಲಂಕಾ ತಂಡದ ಮೇಲೆ ದಾಳಿ ನಡೆದಿತ್ತು. ಇದೇ ಕಾರಣಕ್ಕಾಗಿ, ಪಾಕಿಸ್ತಾನದಲ್ಲಿ ಈವರೆಗೆ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಅಥವಾ ಸರಣಿ ನಡೆದಿರಲಿಲ್ಲ.

2011ರ ವಿಶ್ವಕಪ್ ಆತಿಥ್ಯವಹಿಸಿಕೊಳ್ಳುವ ಆತಿಥ್ಯವಹಿಸಿಕೊಳ್ಳುವುದರಿಂದಲೂ ಆ ದೇಶ ವಂಚಿತವಾಗಿತ್ತು. ಈಗ ಕಾಲ ಸರಿದಿದೆ. ಶುಕ್ರವಾರ ಜಿಂಬಾಬ್ವೆ-ಪಾಕಿಸ್ತಾನ ನಡುವೆ ಟಿ20 ಪಂದ್ಯ ನಡೆಯುವುದರೊಂದಿಗೆ 6 ವರ್ಷಗಳ ಕ್ರಿಕೆಟ್ ಬರ ನೀಗಿದೆ. ಇದೇ ಖುಷಿಯಲ್ಲಿ ಪಾಕಿಸ್ತಾನದ ಹಲವಾರು ಸೆಲೆಬ್ರಿಟಿಗಳು, ಖ್ಯಾತ ರಾಜಕಾರಣಿಗಳು ಖುದ್ದು ಆಗಮಿಸಿ ಪಂದ್ಯಗಳನ್ನು ವೀಕ್ಷಿಸುವ ನಿರೀಕ್ಷೆಯಿದೆ.

ಬಿಗಿಭದ್ರತೆ
ಸರಣಿಯನ್ನು ಸವಾಲಾಗಿ ತೆಗೆದುಕೊಂಡಿರುವ ಪಾಕಿಸ್ತಾನ ಸರ್ಕಾರ, ಇಡೀ ಸರಣಿಗೆ ಭಾರಿ ಬಿಗಿಭದ್ರತೆ ನೀಡಿದೆ. ಪಂದ್ಯಗಳು ನಡೆಯಲಿರುವ ಗಡಾಫಿ ಕ್ರೀಡಾಂಗಣಕ್ಕೆ 3000 ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ, ಕ್ರೀಡಾಂಗಣದ ಪ್ರವೇಶ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್‍ಗಳ ಭಾರೀ ಭದ್ರತೆಯನ್ನೇ ನೀಡಲಾಗಿದೆ. ಶುಕ್ರವಾರ ಕ್ರೀಡಾಂಗಣಕ್ಕೆ ಇತ್ತಂಡಗಳು ಹೊರಟಾಗ ಎರಡೂ ತಂಡಗಳಿದ್ದ ಬಸ್‍ಗಳಿಗೆ ಭಾರಿ ಬಿಗಿಭದ್ರತೆ ಒದಗಿಸಲಾಗಿತ್ತು. ಡಜನ್ ಗಟ್ಟಲೆ ಪೊಲೀಸ್ ವಾಹನಗಳು ಬಸ್‍ಗಳನ್ನು ಸುತ್ತುವರಿದಿದ್ದವು. ಅಲ್ಲದೆ, ಎರಡೂ ಬಸ್ ಗಳನ್ನು ಹೆಲಿಕಾಪ್ಟರ್‍ಗಳ ಮೂಲಕ ಕಣ್ಗಾವಲಿರಿಸಲಾಗಿತ್ತು ಎಂದು ವಾಲ್ ಸ್ಟ್ರೀಟ್ ವೆಬ್‍ಸೈಟ್ ವರದಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT