ಕಳೆದ ಐಪಿಎಲ್ ಫೈನಲ್ಸ್ ಪಂದ್ಯ ಧೋನಿಯವರಿಗೆ ಹಾಗೂ ಅವರ ಅಭಿಮಾನಿಗಳಿಗೆ ನಿಜವಾಗಿಯೂ ನಿರಾಸೆ ಆದರೆ ಸದಾ ಹಸನ್ಮುಖಿ ಸಾಕ್ಷಿ ಸಿಂಗ್ ಧೋನಿ ಕ್ಯಾಮರಾಗಳಿಗೆ ಮುಖ ಮುಚ್ಚಿ ಅವರ ಕತ್ತಿನ ಮೇಲೆ ಹುಯ್ಯಿಸಿಕೊಂಡಿದ್ದ "ಮಾಹಿ" ಹಚ್ಚೆಯನ್ನು ಬಿಚ್ಚಿಟ್ಟಿದ್ದಾರೆ.
೨೦೧೦ ರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಮದುವೆಯಾದಾಗಲಿಂದಲು ಕ್ರಿಕೆಟ್ ಆಟದ ಅತಿ ದೊಡ್ಡ ಅಭಿಮಾನಿಯಾಗಿದ್ದಾರೆ ಸಾಕ್ಷಿ.
ಕೆಲವು ಕ್ರಿಕೆಟ್ ನಿಯಮಗಳ ಬಗ್ಗೆ ತಮ್ಮೊಂದಿಗೆ ಹಲವಾರು ಬಾರಿ ವಾಗ್ವಾದಕ್ಕಿಳಿಯುತ್ತಿದ್ದರು ಸಾಕ್ಷಿ, ನಾನು ಇವುಗಳಿಗೆ ಸಂಯಮದಿಂದ ಕಾರಣಗಳನ್ನು ತಿಳಿಸುತ್ತಿದ್ದೆ ಎಂದು ಧೋನಿ ಖಾಸಗಿ ವಾಹಿನಿಯೊಂದಕ್ಕೆ ಒಮ್ಮೆ ಹೇಳಿದ್ದರು.
ಈಗ ಧೋನಿ ತಂದೆಯಾಗಿದ್ದು, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಆಡುತ್ತಿದ್ದು, ತನ್ನ ಪತ್ನಿ ಸಾಕ್ಷಿ ಮತ್ತು ಮಗಳು ಜೀವಾಗಿಂತಲೂ ದೊಡ್ಡ ಅಭಿಮಾನಿಗಳಿಲ್ಲ. ಎಷ್ಟೇ ನಿರಾಶೆಯಾದರೂ ಸಂಯಮದಿಂದ ವರ್ತಿಸುವ ಧೋನಿ, ತಮ್ಮ ಪತ್ನಿ ತಮ್ಮ ಹಸನ್ಮುಖವನ್ನು ಮುಚ್ಚಿಕೊಂಡಾಗ ತಮ್ಮ ಬಾಳಸಂಗಾತಿಯ ಹೆಸರಿನ ಟ್ಯಾಟು ಪ್ರದರ್ಶನವಾದದ್ದು ಹೀಗೆ!