ಭಾರತದ ಅಟಗಾರ್ತಿ ಪಿವಿ ಸಿಂಧು 
ಕ್ರೀಡೆ

ಬ್ಯಾಡ್ಮಿಂಟನ್ ರ್ಯಾಂಕಿಂಗ್: 14ನೇ ಸ್ಥಾನಕ್ಕೆ ಕುಸಿದ ಭಾರತದ ಪಿವಿ ಸಿಂಧು

ಶುಕ್ರವಾರ ವಿಶ್ವ ಬ್ಯಾಡ್ಮಿಂಟನ್ ನೂತನ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ಉದಯೋನ್ಮುಖ ಆಟಗಾರ್ತಿ ಪಿವಿ ಸಿಂಧು ಅವರು 2 ಸ್ಥಾನಗಳ ಕುಸಿತಕಂಡಿದ್ದಾರೆ.

ನವದೆಹಲಿ: ಶುಕ್ರವಾರ ವಿಶ್ವ ಬ್ಯಾಡ್ಮಿಂಟನ್ ನೂತನ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ಉದಯೋನ್ಮುಖ ಆಟಗಾರ್ತಿ ಪಿವಿ ಸಿಂಧು ಅವರು 2 ಸ್ಥಾನಗಳ ಕುಸಿತಕಂಡಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯೂ ಭಾರತದ ಸೈನಾ ನೆಹ್ವಾಲ್ ಅವರು 82342 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, 2ನೇ ಸ್ಥಾನದಲ್ಲಿ ಚೀನಾದ ಲೀ ಕ್ಸೆರುಯಿ ಮತ್ತು 3ನೇ ಸ್ಥಾನದಲ್ಲಿ ಸ್ಪಾನಿಷ್ ನ ಕೆರೋಲಿನಾ ಮರಿನ್ ಇದ್ದಾರೆ. ಇನ್ನು ಕಳೆದ ಬಾರಿ 12 ಸ್ಥಾನದಲ್ಲಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು 2 ಸ್ಥಾನಗಳ ಕುಸಿತಕಂಡು ಪ್ರಸ್ತುತ 14ನೇ ಸ್ಥಾನದಲ್ಲಿದ್ದಾರೆ. ಪಿವಿ ಸಿಂಧು ಒಟ್ಟು 49810 ಅಂಕಗಳನ್ನು ಗಳಿಸಿದ್ದಾರೆ.

ಇನ್ನು ಪುರುಷರ ವಿಭಾಗದಲ್ಲಿ ಚೀನಾದ ಚೆನ್ ಲಾಂಗ್ ಅಗ್ರ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ ಚೀನಾದವರೇ ಆದ ಲಿನ್ ಡಾನ್ ಸ್ಥಾನ ಪಡೆದಿದ್ದಾರೆ. ಇನ್ನು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಡೆನ್ಮಾರ್ಕ್ ನ ಜಾನ್ ಒ ಜಾರ್ಗೆನ್ಸೆನ್ ಮತ್ತು ಭಾರತದ ಕೆ.ಶ್ರೀಕಾಂತ್ ಇದ್ದಾರೆ. ಶ್ರೀಕಾಂತ್ ಒಟ್ಟು 69164 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಕೊರಿಯಾದ ಲೀಯಾಂಗ್ ಡೇಯಿ ಮತ್ತು ಯೂಯಿಯಾನ್ ಸಿಯಾಂಗ್ ಅಗ್ರ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT