2 ಕೋಟಿ ಮೌಲ್ಯದ ಹೊಸ ಆಡಿ ಕಾರು ಖರೀದಿಸಿದ ವಿರಾಟ್
ಭಾರತ ಏಕದಿನ ತಂಡದ ಉಪನಾಯಕ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸುಮಾರು 2 ಕೋಟಿ ಮೌಲ್ಯದ ಆಡಿ ಕಾರು ಖರೀದಿಸಿದ್ದಾರೆ.
ನವದೆಹಲಿ: ಭಾರತ ಏಕದಿನ ತಂಡದ ಉಪನಾಯಕ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸುಮಾರು 2 ಕೋಟಿ ಮೌಲ್ಯದ ಆಡಿ ಕಾರು ಖರೀದಿಸಿದ್ದಾರೆ.
ಆಡಿ ಸಂಸ್ಥೆಯ ಅತ್ಯಂತ ದುಬಾರಿ ಕಾರುಗಳ ಸರಣಿಯಲ್ಲಿ ನಿಲ್ಲುವ ಆಡಿ ಎ8ಎಲ್ ಡಬ್ಲ್ಯೂ 12 ಕ್ವಾಟ್ರೋ ಕಾರನ್ನು ಸೋಮವಾರ ವಿರಾಟ್ ಕೊಹ್ಲಿ ಅವರಿಗೆ ವಿತರಿಸಲಾಗಿದ್ದು, ಕೊಹ್ಲಿ ಅವರ ದುಬಾರಿ ಕಾರು ಸಂಗ್ರಹಣೆಗೆ ಇದು ಹೊಸ ಸೇರ್ಪಡೆಯಾಗಿದೆ. ವಿರಾಟ್ ಕೊಹ್ಲಿ ಬಳಿ ಈಗಾಗಲೇ ಆಡಿ ಸಂಸ್ಥೆಗೆ ಸೇರಿದ ಆರ್8, ಆರ್8 ಎಲ್ಎಂಎಕ್ಸ್ ಮತ್ತು ಕ್ಯೂ 7 ಸರಣಿಯ ಕಾರುಗಳಿದ್ದು, ಆಡಿ ಎ8ಎಲ್ ಡಬ್ಲ್ಯೂ 12 ಕ್ವಾಟ್ರೋ ಇದಕ್ಕೆ ಹೊಸ ಸೇರ್ಪಡೆಯಾಗಿದೆ.