ವಿಕೆಟ್ ಪಡೆದ ಸಂಭ್ರಮದಲ್ಲಿ ಅಶ್ವಿನ್ (ಚಿತ್ರಕೃಪೆ: ಕ್ರಿಕ್ ಇನ್ಫೋ) 
ಕ್ರೀಡೆ

2ನೇ ಟೆಸ್ಟ್: ಭಾರತದ ಸ್ಪಿನ್ ದಾಳಿಗೆ ಮುಗ್ಗರಿಸಿದ ದ.ಆಫ್ರಿಕಾ

ಬೆಂಗಳೂರು ಟೆಸ್ಟ್ ಪಂದ್ಯದಲ್ಲಿಯೂ ಭಾರತದ ಬೌಲರ್ ಗಳ ಪಾರಮ್ಯ ಮುಂದುವರೆದಿದ್ದು, ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಪ್ರಮುಖ 8 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದ ಸ್ಥಿತಿ ಎದುರಿಸುತ್ತಿದೆ...

ಬೆಂಗಳೂರು: ಬೆಂಗಳೂರು ಟೆಸ್ಟ್ ಪಂದ್ಯದಲ್ಲಿಯೂ ಭಾರತದ ಬೌಲರ್ ಗಳ ಪಾರಮ್ಯ ಮುಂದುವರೆದಿದ್ದು, ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಪ್ರಮುಖ 8 ವಿಕೆಟ್  ಗಳನ್ನು ಕಳೆದುಕೊಂಡು ಸಂಕಷ್ಟದ ಸ್ಥಿತಿ ಎದುರಿಸುತ್ತಿದೆ.

ಟಾಸ್ ಗೆದ್ದ ವಿರಾಟ್ ಕೊಹ್ಲಿ ಪಡೆ ಮೊದಲಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಆತ್ಮ ವಿಶ್ವಾಸದಿಂದಲೇ ಕ್ರೀಸ್ ಗಿಳಿದ ದಕ್ಷಿಣ ಆಫ್ರಿಕಾ ತಂಡ ಬ್ಯಾಟ್ಸಮನ್ ಗಳಿಗೆ  ಭಾರತ ಸ್ಪಿನ್ನರ್ ಗಳು ಅಡ್ಡಗೋಡೆಯಾಗಿ ನಿಂತರು. ಆರಂಭದಲ್ಲೇ ವ್ಯಾನ್ ಜಿಲ್ ರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಪ್ರವಾಸಿ ತಂಡದ ಮೇಲೆ ಒತ್ತಡ ಹೇರಿದ ಭಾರತೀಯ ಬೌಲರ್ ಗಳು  ಪಂದ್ಯದ ಯಾವುದೇ ಹಂತದಲ್ಲಿಯೂ ಅವರಿಗೆ ಚೇತರಿಸಿಕೊಳ್ಳುವ ಅವಕಾಶ ನೀಡಲಿಲ್ಲ.

ನೋಡನೋಡುತ್ತಿದ್ದಂತೆಯೇ ಆಫ್ರಿಕಾ ತಂಡದ ವಿಕೆಟ್ ಗಳು ಉರುಳ ತೊಡಗಿದವು. ಪ್ರವಾಸಿ ತಂಡದ ಮೇಲೆ ಸವಾರಿ ಮಾಡಿದ ಭಾರತದ ರವೀಂದ್ರ ಜಡೇಜಾ (4 ವಿಕೆಟ್) ಮತ್ತು ಆರ್. ಅಶ್ವಿನ್  (3 ವಿಕೆಟ್) ಜೋಡಿ ಆಫ್ರಿಕಾ ತಂಡಕ್ಕೆ ಮಾರಕವಾಗಿ ಪರಿಣಮಿಸಿತು. ಆಫ್ರಿಕಾ ಪರ ಆರಂಭಿಕ ಆಟಗಾರ ಎಲ್ಗಾರ್ (38 ರನ್) ಮತ್ತು ಮಧ್ಯಮ ಕ್ರಮಾಂಕದಲ್ಲಿ ಆಡಿದ ಎಬಿಡಿವಿಲಿಯರ್ಸ್ (85 ರನ್)  ಉತ್ತಮ ಆಟವಾಡಿದರೂ ಅದು ದಕ್ಷಿಣ ಆಫ್ರಿಕಾಕ್ಕೆ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ.

ತಂಡದ ಮೊತ್ತ 120 ರನ್ ಗಡಿ ದಾಟುವ ವೇಳೆಗೆ ತಂಡದ ಪ್ರಮುಖ 5 ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿಕೊಂಡಿದ್ದರು. ವ್ಯಾನ್ ಜಿಲ್ (10 ರನ್), ಡುಪ್ಲೆಸಿಸ್ (0 ರನ್), ಅಶೀಂ ಆಮ್ಲಾ (07  ರನ್), ಡುಮಿನಿ (15 ರನ್), ವಿಲಾಸ್ಟ್ (15 ರನ್) ಮತ್ತು ರಬಾಡ (0 ರನ್) ಯಾರೂ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ. ಪ್ರಸ್ತುತ 8 ವಿಕೆಟ್ ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡ ಕೇವಲ  203ರನ್ ಗಳಿಸಿದ್ದು, ಪ್ರವಾಸಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಭಾರತ ಪ್ರಯತ್ನಿಸುತ್ತಿದೆ.

ಇತ್ತೀಚಿನ ವರದಿಗಳು ಬಂದಾಗ ದಕ್ಷಿಣ ಆಫ್ರಿಕಾ ತಂಡ 58 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿದೆ. ಭಾರತ ಪರ ಆರ್ ಅಶ್ವಿನ್ 3 ವಿಕೆಟ್ ಕಬಳಿಸಿದ್ದು, ರವೀಂದ್ರ ಜಡೇಜಾ 4 ವಿಕೆಟ್  ಗಳಿಸಿದ್ದಾರೆ. ವೇಗಿ ಆ್ಯರೋನ್ 1 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿದ್ದಾರೆ.

ತಮ್ಮ ವೃತ್ತಿ ಜೀವನ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ದಕ್ಷಿಣ ಆಫ್ರಿಕಾದ ಎಬಿಡಿವಿಲಿಯರ್ಸ್ 85 ರನ್ ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸುವ ಮೂಲಕ ಶತಕ ವಂಚಿತರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್