ನವದೆಹಲಿ: ಕೇಂದ್ರ ಸರ್ಕಾರದ ಒಲಿಂಪಿಕ್ಸ್ ಪೋಡಿಯಂ ಯೋಜನೆ (ಟಾಪ್)ಗೆ ಟೆನ್ನಿಸಿಗ ರೋಹನ್ ಬೋಪಣ್ಣ, ಸಾನಿಯಾ ಸೇರ್ಪಡೆ ಗೊಂಡಿದ್ದಾರೆ.
ಈ ಬಗ್ಗೆ ಕೇಂದ್ರ ಕ್ರೀಡಾ ಇಲಾಖೆ ಶುಕ್ರವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ರಾಷ್ಟ್ರೀಯ ಕ್ರೀಡಾಭಿವೃದ್ಧಿ ನಿಧಿ (ಎನ್‌ಎಸ್‌ಡಿಎಫ್) ಯಿಂದ ಬೋಪಣ್ಣ ಅವರಿಗೆ ರು.೬೦ ಲಕ್ಷ ಹಣ ಮಂಜೂರಾಗಿದ್ದು, ಉನ್ನತ ಮಟ್ಟದ ತರಬೇತಿ ಪಡೆಯಲು ಅವರಿಗೆ ನೆರವಾಗಲಿದೆ. ಬೋಪಣ್ಣ ಅವರು ತಮ್ಮ ವೈಯಕ್ತಿಕ ಕೋಚ್ ಆಗಿ ಸ್ಕಾಟ್ ಡೇವಿಡರ್ಫ್ ಹಾಗೂ ಯಶ್ ಆರ್ ಪಾಂಡೆ ಅವರನ್ನು ದೈಹಿಕ ತರಬೇತುದಾರರನ್ನಾಗಿ ಆಯ್ಕೆ ಮಾಡಿಕೊಳ್ಳಲು ಬಯಸಿದ್ದರು . ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನಸಹಾಯಕ್ಕಾಗಿ ಮನವಿ ಸಲ್ಲಿಸಿದ್ದರು.