ಪರ್ತ್: ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
ಇಂದು ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಡ್ರಾ ಆಗಿದ್ದು, ಎರಡು ವಿಕೆಟ್ ಗಳನ್ನು ಕಬಳಿಸಿದ ಮಿಚೆಲ್ ಜಾನ್ಸನ್ ಎಲ್ಲಾ ಅಂತಾರಾಷ್ಟ್ರೀಯ ಮಾದರಿ ಕ್ರಿಕೆಟ್ ಗೂ ವಿದಾಯ ಘೋಷಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ಇದು ಸಕಾಲ ಎನಿಸುತ್ತಿದೆ. ಅದೇ ಕಾರಣಕ್ಕಾಗಿ ಗುಡ್ ಬೈ ಹೇಳುತ್ತಿದ್ದೇನೆ. ಇಷ್ಟು ದಿನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದ್ದು ಕಳೆದಿರುವ ದಿನಗಳು, ಅನುಭವ ನಿಜಕ್ಕೂ ಮರೆಯಲಾಗದು. ಸಾಕಷ್ಟು ಕ್ಷಣಗಳಲ್ಲಿ ಖುಷಿ ಪಟ್ಟಿದ್ದೇನೆ. ದೇಶಕ್ಕಾಗಿ ಆಡಿರುವ ಹೆಮ್ಮೆ ಇದೆ ಎಂದು ಮಿಚೆಲ್ ಜಾನ್ಸನ್ ಹೇಳಿದ್ದಾರೆ.
153 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ಜಾನ್ಸನ್ 239 ವಿಕೆಟ್ ಸಂಪಾದಿಸಿದ್ದು, 951 ರನ್ ಸಿಡಿಸಿದ್ದಾರೆ.
72 ಟೆಸ್ಟ್ ಪಂದ್ಯಗಳನ್ನಾಡಿರುವ ಮಿಚೆಲ್ ಜಾನ್ಸನ್ 310 ವಿಕೆಟ್ ಸಂಪಾದಿಸಿ, 2034 ರನ್ ಗಳಿಸಿದ್ದಾರೆ.