ವನಿತೆಯರಿಗೆ ಸರಣಿ ಸೋಲು
ಅರ್ಜೈಂಟೀನಾ ವಿರುದ್ಧದ ಅಭ್ಯಾಸ ಹಾಕಿ ಸರಣಿಯ ದ್ವಿತೀಯ ಪಂದ್ಯದಲ್ಲಿ ಭಾರತ ಮಹಿಳಾ ತಂಡ, 14 ಗೋಲುಗಳ ಅಂತರದಿಂದ ಸೋಲು ಕಂಡಿದೆಯಲ್ಲದೆ, ಎರಡು ಪಂದ್ಯಗಳ ಸರಣಿಯನ್ನು 10 ಅಂತರದಿಂದ ಸೋತಿದೆ...
ಬ್ಯುನೋಸ್ ಐರಿಸ್: ಅರ್ಜೈಂಟೀನಾ ವಿರುದ್ಧದ ಅಭ್ಯಾಸ ಹಾಕಿ ಸರಣಿಯ ದ್ವಿತೀಯ ಪಂದ್ಯದಲ್ಲಿ ಭಾರತ ಮಹಿಳಾ ತಂಡ, 14 ಗೋಲುಗಳ ಅಂತರದಿಂದ ಸೋಲು ಕಂಡಿದೆಯಲ್ಲದೆ, ಎರಡು ಪಂದ್ಯಗಳ ಸರಣಿಯನ್ನು 10 ಅಂತರದಿಂದ ಸೋತಿದೆ.
ಗುರುವಾರ ನಡೆದ ಪಂದ್ಯದಲ್ಲಿ, ಆಕ್ರಮಣಕಾರಿ ಆಟ ಪ್ರದರ್ಶಿಸಿದ ಅರ್ಜೈಂಟೀನಾ ಪರ ಪಂದ್ಯದ ಮೊದಲಾರ್ಧಲ್ಲಿ ಮಾರ್ಟಿನಾ ಕ್ಯಾವೆಲ್ಲೆರೊ, ಪೈಲರ್ ರೊಮಾಂಗ್ ತಲಾ ಒಂದೊಂದು ಗೋಲು ಗಳಿಸಿದರೆ, ನೋಯೆಲ್ ಬ್ಯಾರಿನೊವೊ ಮತ್ತೆರಡು ಗೋಲು ದಾಖಲಿಸಿದರು. ಭಾರತದ ಪರ ದಾಖಲಾದ ಏಕೈಕ ಗೋಲ್ ಅನ್ನು ವಂದನಾ ಕಟಾರಿಯಾ ತಂದುಕೊಟ್ಟರು. ಇತ್ತಂಡಗಳ ನಡುವಿನ ಮೊದಲ ಪಂದ್ಯ 22 ಸಮಬಲದಲ್ಲಿ ಡ್ರಾ ಆಗಿತ್ತು.