ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಿಎಸ್‍ಎನ್‍ಎಲ್ ಮಣಿಸಿದ ಕರ್ನಾಟಕ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯ ಎರಡನೇ ದಿನವಾದ ಬುಧವಾರ ಸಿಹಿಕಹಿ ಉಂಡಿದ್ದ ಕರ್ನಾಟಕ ಪುರುಷರ ತಂಡ, ಗುರುವಾರ ನಡೆದ ಬಿಎಸ್‍ಎನ್‍ಎಲ್ ತಂಡದ ವಿರುದ್ಧದ ಪಂದ್ಯದಲ್ಲಿ 20 ಅಂಕಗಳ ಅಂತರದ..

ರಾಷ್ಟ್ರೀಯ ಕಬ್ಬಡ್ಡಿ ಲೀಗ್ (ಸಂಗ್ರಹ ಚಿತ್ರ)
Srinivasa Murthy VN
Updated On : 27 Nov 2015, 11:56 am

ಬೆಂಗಳೂರು: ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯ ಎರಡನೇ ದಿನವಾದ ಬುಧವಾರ ಸಿಹಿಕಹಿ ಉಂಡಿದ್ದ ಕರ್ನಾಟಕ ಪುರುಷರ ತಂಡ, ಗುರುವಾರ ನಡೆದ ಬಿಎಸ್‍ಎನ್‍ಎಲ್ ತಂಡದ ವಿರುದ್ಧದ  ಪಂದ್ಯದಲ್ಲಿ 20 ಅಂಕಗಳ ಅಂತರದ ಮೂಲಕ ಜಯ ಗಳಿಸುವ ಮೂಲಕ 63ನೇ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಮೂರನೇ ಗೆಲುವು ದಾಖಲಿಸಿದೆ.

ನಗರದ ಮಲ್ಲೇಶ್ವರ ಆಟದ ಮೈದಾನಲ್ಲಿ ನಡೆದ ಪಂದ್ಯದಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡಿದ ಕರ್ನಾಟಕ 4323ರಿಂದ ಬಿಎಸ್ಸೆನ್ನೆಲ್ ವಿರುದ್ಧ ಜಯ ಪಡೆಯಿತು.

ಇತರ ಫಲಿತಾಂಶಗಳು: ಗುರುವಾರ ನಡೆದ ಮತ್ತಿತರ ಪುರುಷರ ವಿಭಾಗದ ಪಂದ್ಯಗಳಲ್ಲಿ, ಪಾಂಡಿಚೇರಿ ತಂಡ, ಅಸ್ಸಾಂ ತಂಡದ ವಿರುದ್ಧ 51-48 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು.  ಇನ್ನು, ರಾಜಸ್ಥಾನ ತಂಡ ಮಧ್ಯಪ್ರದೇಶದ ವಿರುದ್ಧ 41-34, ಪಂಜಾಬ್ ವಿರುದ್ಧ ಚಂಡೀಗಡ 50-35 ಅಂಕಗಳ ಗೆಲವು ಸಾಧಿಸಿದರೆ, ವಿದರ್ಭ ವಿರುದ್ಧ ಹರ್ಯಾಣ 48-12 ಅಂಕಗಳ ಅಂತರದಲ್ಲಿ,  ತಮಿಳುನಾಡು ತಂಡ, ಕೇರಳ ವಿರುದ್ಧ 42-30 ಅಂತರದಲ್ಲಿ, ಪಶ್ಚಿಮ ಬಂಗಾಳ ತಂಡ, ಆಂಧ್ರಪ್ರದೇಶ ವಿರುದ್ಧ 3326 ಅಂಕಗಳ ಅಂತರದಲ್ಲಿ ಜಯ ಗಳಿಸಿದವು.

ಇನ್ನು, ಹಿಮಾಚಲ ಪ್ರದೇಶವು, ಉತ್ತರ ಪ್ರದೇಶ ವಿರುದ್ಧ 33-16 ಅಂತರದಲ್ಲಿ ಸೋಲಿಸಿದರೆ, ಸರ್ವೀಸಸ್ ತಂಡವು ತಮಿಳುನಾಡು ವಿರುದ್ಧ 34-30 ಅಂತರದಲ್ಲಿ ಮಣಿಸಿತು. ತ್ರಿಪುರಾ ತಂಡ,  ಗೋವಾ ತಂಡವನ್ನು 28-21 ಅಂತರದಲ್ಲಿ ಸೋಲಿಸಿದರೆ, ತ್ರಿಪುರಾ ವಿರುದ್ಧ ಅಸ್ಸಾಂ ತಂಡವನ್ನು 19-47 ಅಂಕಗಳಿಂದ ಜಯಿಸಿತು. ಮಹಾರಾಷ್ಟ್ರ ತಂಡವು, ಬಿಹಾರ ವಿರುದ್ಧ 42-13 ಅಂತರದಿಂದ  ಗೆಲವು ಸಾಧಿಸಿದರೆ, ಬಂಗಾಳ ತಂಡ ಒಡಿಶಾ ವಿರುದ್ಧ 37-4 ಅಂತರದಲ್ಲಿ ಗೆದ್ದುಕೊಂಡಿತು. ಇನ್ನು, ಉತ್ತರಾ ಖಾಂಡ ತಂಡ, ಆಂಧ್ರಪ್ರದೇಶದ ವಿರುದ್ಧ 31-13 ಅಂತರದಲ್ಲಿ ಜಯ ಸಾಧಿಸಿತು.

ಕೇರಳ ತಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧ 47-7 ಅಂತರದಲ್ಲಿ ಗೆಲವು ಕಂಡಿತು. ಮಹಿಳೆಯರ ವಿಭಾಗದಲ್ಲಿ, ಎಚ್‍ಪಿ ತಂಡ, ಪಾಂಡಿಚೇರಿ ವಿರುದ್ಧ 66-16, ಬಿಹಾರದ ವಿರುದ್ಧ ಪಂಜಾಬ್  38-19, ಕೇರಳ ವಿರುದ್ಧ ಹರ್ಯಾಣ 40-15 ಅಂತರದಲ್ಲಿ ಗೆಲವು ಪಡೆದರೆ, ವಿದರ್ಭ ವಿರುದ್ಧ ರೈಲ್ವೇಸ್ 5613 ಅಂಕಗಳಿಂದ ಜಯಿಸಿತು. ಆದರೆ, ಕೇರಳ ತಂಡವು ಮತ್ತೊಂದು ಪಂದ್ಯದಲ್ಲಿ ಜಮ್ಮು ಕಾಶ್ಮೀರವನ್ನು 37-5 ಅಂತರದಲ್ಲಿ ಮಣಿಸಿತು.

ರೈಲ್ವೇಸ್ ತಂಡವು ಮತ್ತೊಂದು ಪಂದ್ಯದಲ್ಲಿ ಗುಜರಾತ್ ವಿರುದ್ಧ 346 ಅಂತರದಲ್ಲಿ ಜಯಿಸಿತು. ಇನ್ನು ಪಶ್ಚಿಮ ಬಂಗಾಳ ಹಾಗೂ ಬಾಕಾ ತಂಡಗಳ ನಡುವಿನ ಪಂದ್ಯ 11ರ ಸಮಬಲದಲ್ಲಿ ಡ್ರಾ ಆಯಿತು. ಮಹಾರಾಷ್ಟ್ರ ತಂಡವು ಗೋವಾ ತಂಡವನ್ನು 393 ಅಂತರದಲ್ಲಿ ಮಣಿಸಿದರೆ, ಹರ್ಯಾಣ ತಂಡವು ಒಡಿಶಾ ವಿರುದ್ಧ 70-1 ಅಂತರದಲ್ಲಿ ಜಯಿಸಿತು. ಪಶ್ಚಿಮ ಬಂಗಾಳವು ಅಸ್ಸಾಂ ವಿರುದ್ಧ 2916ರ ಅಂತರದಲ್ಲಿ ಗೆಲವು ಕರ್ನಾಟಕ ಆಟಗಾರನನ್ನು ಹಿಡಿಯುವ ಭರದಲ್ಲಿರುವ ಬಿಎಸ್ಸೆನ್ನೆಲ್ ಆಟಗಾರ ಕಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement