ಪ್ರೇರಣಾ ಭಾಂಬ್ರಿ (ಸಂಗ್ರಹ ಚಿತ್ರ) 
ಕ್ರೀಡೆ

ಪ್ರೇರಣಾ ಸೆಮಿಫೈನಲ್‍ಗೆ

ಟೂರ್ನಿಯ ಅಗ್ರಶ್ರೇಯಾಂಕಿತೆ ಪ್ರೇರಣಾ ಭಾಂಬ್ರಿಗೆ, ಐಟಿಎಫ್ ಕಲಬುರಗಿ ಟೆನಿಸ್ ಟೂರ್ನಿಯ ಮೂರನೇ ದಿನವಾದ ಗುರುವಾರ ಸಿಹಿ ಹಾಗೂ ಕಹಿ ಅನುಭವಗಳೆರಡೂ ಸಿಕ್ಕಿವೆ...

ಕಲಬುರಗಿ: ಟೂರ್ನಿಯ ಅಗ್ರಶ್ರೇಯಾಂಕಿತೆ ಪ್ರೇರಣಾ ಭಾಂಬ್ರಿಗೆ, ಐಟಿಎಫ್ ಕಲಬುರಗಿ ಟೆನಿಸ್ ಟೂರ್ನಿಯ ಮೂರನೇ ದಿನವಾದ ಗುರುವಾರ ಸಿಹಿ ಹಾಗೂ ಕಹಿ ಅನುಭವಗಳೆರಡೂ ಸಿಕ್ಕಿವೆ.

ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‍ಗೆ ಕಾಲಿಟ್ಟ ಸಂಭ್ರಮದಲ್ಲಿದ್ದ ಅವರು, ಡಬಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹೊಸ್ತಿಲಲ್ಲಿ ಎಡವಿ ನಿರಾಸೆಗೊಂಡರು. ಸಿಂಗಲ್ಸ್ ನ ಕ್ವಾರ್ಟರ್ ಫೈನಲ್  ಪಂದ್ಯದಲ್ಲಿ ಅವರು, ನಿಧಿ ಚುಲುಮುಲಾ ವಿರುದ್ಧ 64, 75 ನೇರಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರೂ, ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಜತೆಗಾತಿ ಕನಿಕಾ ವೈದ್ಯ  ಅವರೊಂದಿಗೆ ನಿಧಿ ಚಿಲುಮುಲಾ ಹಾಗೂ ಈಟೀ ಮಹೆಟಾ ಜೋಡಿ ವಿರುದ್ಧ 76 (7), 63 ಸೆಟ್‍ಗಳ ಅಂತರದಲ್ಲಿ ಸೋಲು ಕಂಡರು. ಸಿಂಗಲ್ಸ್ ನಲ್ಲಿ ಪ್ರೇರಣಾ ವಿರುದ್ಧ ಸೋತಿದ್ದ ನಿಧಿ  ಚಿಲುಮುಲಾ, ಡಬಲ್ಸ್ ನಲ್ಲಿ ಪ್ರಾಬಲ್ಯ ಮೆರೆದಿದ್ದು ದಿನದ ವಿಶೇಷವಾಗಿತ್ತು.

ಆರಂಭಿಕ ಹಿನ್ನಡೆ ಮೆಟ್ಟಿದ ಪ್ರೇರಣಾ
ಟೂರ್ನಿಯ 6ನೇ ಶ್ರೇಯಾಂಕಿತೆಯಾದ ನಿಧಿ ಚಿಲುಮುಲಾ ವಿರುದ್ಧ ಪ್ರೇರಣಾ ಮುಖಾಮುಖಿಯಾಗಿದ್ದ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಹೋರಾಟ ಕುತೂಹಲಕಾರಿಯಾಗಿತ್ತು. ಪಂದ್ಯದ ಆರಂಭದಲ್ಲಿ ತೀವ್ರ ಹಿನ್ನಡೆ ಅನುಭವಿಸಿದರೂ, ಒಂದು ಹಂತದಲ್ಲಿ ಪುಟಿದೆದ್ದು ನಿಧಿಗೆ ತಿರುಗೇಟು ನೀಡಿದ್ದು ಕ್ರೀಡಾಂಗಣದಲ್ಲಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಪ್ರತಿ ಹಂತದಲ್ಲೂ ತಮಗೆ ಸವಾಲೆಸೆಯುತ್ತಿದ್ದ ನಿಧಿಯ ತಂತ್ರಗಾರಿಕೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದರಾದರೂ ಅನೇಕ ವೇಳೆ ಹಿನ್ನಡೆ ಅನುಭವಿಸಬೇಕಾಯಿತು. ಆದರೂ, ನಿರ್ಣಾಯಕ ಘಟ್ಟದಲ್ಲಿ ಚೇತರಿಕೆಯ ಪ್ರದರ್ಶನ ನೀಡಿದ ಪ್ರೇರಣಾ, ಪಂದ್ಯ ತಮ್ಮ ಕೈಯಿಂದ ಜಾರದಂತೆ ನೋಡಿಕೊಂಡರು.

ಪ್ರಾರ್ಥನಾಗೆ ಸೋಲು

ದಿನದ ಪಂದ್ಯಗಳಲ್ಲಿ ಅಚ್ಚರಿಯ ಶಾಕ್ ನೀಡಿದ ಮತ್ತೊಂದು ಪಂದ್ಯವೆಂದರೆ, ಈಟಿ ಮಹೆಟಾ ಹಾಗೂ ಪ್ರಾರ್ಥನಾ ಥೋಂಬ್ರೆ ನಡುವಿನ ಮುಖಾಮುಖಿ. ಭಾರೀ ಪೈಪೋಟಿಯಿಂದ ಕೂಡಿದ್ದ ಈ  ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 7ನೇ ಶ್ರೇಯಾಂಕಿತೆ ಮಹೆಟಾ, 4ನೇ ಶ್ರೇಯಾಂಕಿತೆಯಾದ ಪ್ರಾರ್ಥನಾ ಅವರನ್ನು 61, 63 ನೇರ ಸೆಟ್‍ಗಳಲ್ಲಿ ಪರಾಭವಗೊಳಿಸಿ ಅಚ್ಚರಿಯ ಫಲಿತಾಂಶ  ನೀಡಿದರು.

ಇತರ ಫಲಿತಾಂಶಗಳು
ಸಿಂಗಲ್ಸ್ (ಕ್ವಾರ್ಟರ್ ಫೈನಲ್)

ಆಸ್ತಾ ದಾರ್ಗುಡೆ ವಿರುದ್ಧ ತಮಾಚಾನ್ ಮೊಮ್ಕೂನ್‍ತೋಡ್‍ಗೆ 46, 57 ಅಂತರದಲ್ಲಿ ಗೆಲವು
ಸಾಯಿ ಸಂಹಿತಾ ಚಾಮರ್ತಿ ವಿರುದ್ಧ ನತಾಶಾ ಪಾಲ್ಹಾಗೆ 16, 46 ಅಂತರದಲ್ಲಿ ಜಯ

ಡಬಲ್ಸ್ (ಸೆಮಿಫೈನಲ್)
ರಿಯಾ ಭಾಟಿಯಾ ಶ್ವೇತಾ ರಾಣಾ ಜೋಡಿ ವಿರುದ್ಧ ಧೃತಿ ತಾತಾಚಾರ್ ವೇಣುಗೋಪಾಲ್ ಕರ್ಮನ್ ಕೌರ್ ಥಂಡಿ ಜೋಡಿಗೆ 16, 36 ಅಂತರದ ಜಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!