ಹರ್ಭಜನ್ ಸಿಂಗ್ ಮತ್ತು ಗೀತಾ ಬಾಸ್ರಾ 
ಕ್ರೀಡೆ

ಸಿದ್ದವಾಗಿದೆ ಹರ್ಭಜನ್ ಸಿಂಗ್ -ಗೀತಾ ವಿವಾಹ ಆಮಂತ್ರಣ ಪತ್ರಿಕೆ

ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಗೀತಾ ಬಾಸ್ರಾ ವಿವಾಹದ ಆಮಂತ್ರಣ ರೆಡಿಯಾಗಿದ್ದು, ವಿವಾಹಕ್ಕೆ ಆಹ್ವಾನಿಸುವ ಕಾರ್ಯದಲ್ಲಿ ಇಬ್ಬರು ತೊಡಗಿದ್ದಾರೆ.

ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಗೀತಾ ಬಾಸ್ರಾ ಇದೇ ತಿಂಗಳ 29 ರಂದು ಹಸೆಮಣೆ ಏರಲಿದ್ದಾರೆ. ಈಗಾಗಲೇ ವಿವಾಹದ ಆಮಂತ್ರಣ ರೆಡಿಯಾಗಿದ್ದು, ವಿವಾಹಕ್ಕೆ ಆಹ್ವಾನಿಸುವ ಕಾರ್ಯದಲ್ಲಿ ಇಬ್ಬರು ತೊಡಗಿದ್ದಾರೆ.

ಡಿಸೈನರ್ ಆದಿ ಸಿಂಗ್ ಈ ಆಮಂತ್ರಣ ಪತ್ರಿಕೆಯನ್ನು ಸಿದ್ದ ಪಡಿಸಿದ್ದಾರೆ.  ಇನ್ನು ವಧು ವರರ ವಿವಾಹ ಉಡುಪುಗಳು ಕೂಡ ರೆಡಿಯಾಗುತ್ತಿವೆ. ವಿವಾಹದ ದಿನ ಹರ್ಭಜನ್ ಸಿಂಗ್ ಶೇರ್ವಾನಿ ಧರಿಸಲಿದ್ದಾರಂತೆ.  ರಾಘವೇಂದ್ರ ರಾಥೋಡ್ ಎಂಬವರು ಹರ್ಭಜನ್ ಗೆ ಕ್ಯಾಸ್ಟ್ಯೂಮ್ ಸಿದ್ದಗೊಳಿಸುತ್ತಿದ್ದಾರಂತೆ. ಇನ್ನು ವಿವಾಹದ ದಿನ ಗೀತಾ ಲೆಹಂಗಾ ಧರಿಸಲಿದ್ದಾರೆ. ಇನ್ನು ವಿವಾಹ 5 ದಿನಗಳ ಕಾಲ ಭರ್ಜರಿಯಾಗಿ ನಡೆಯಲಿದೆ. ಇನ್ನು ಪಂಜಾಬ್ ಶೈಲಿಯಲ್ಲೇ ವಿವಾಹ ಕಾರ್ಯಕ್ರಮಗಳು ನಡೆಯಲಿವೆ.

ಇನ್ನು ವಿವಾಹ ಹರ್ಭಜನ್ ತವರುನಗರ ಜಲಂಧರ್‌ನಿಂದ 20 ಕಿಮೀ ದೂರದ ಪಾಗ್ವಾರಾದ ಹೊಟೆಲ್ ಕ್ಲಬ್ ಕಬಾನಾದಲ್ಲಿ ನಡೆಯಲಿದೆ. ಬಳಿ ಮುಂಬೈನಲ್ಲಿ ತಾಜ್ ಪ್ಯಾಲೇಸ್ ನಲ್ಲಿ ಆರಕ್ಷತೆ ನಡೆಯಲಿದೆ. ಇನ್ನು ವಿವಾಹಕ್ಕೆ ಬಾಲಿವುಡ್ ಹಾಗೂ ಕ್ರಿಕೆಟ್ ತಾರೆಯರು ಆಗಮಿಸಲಿದ್ದಾರೆ. ಬಾಲಿವುಡ್ ನ ಬಹು ನಿರೀಕ್ಷಿತ ಮದುವೆಯೊಂದಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT