ಶಿವ ಥಾಪ, ವಿಕಾಸ್ ಕೃಷ್ಣನ್ 
ಕ್ರೀಡೆ

ಕ್ವಾರ್ಟರ್ ಫೈನಲ್‍ಗೆ ವಿಕಾಸ್, ಶಿವಥಾಪಾ

ಭಾರತದ ಬಾಕ್ಸರ್ ಗಳಾದ ಶಿವ ಥಾಪಾ ಹಾಗೂ ವಿಕಾಸ್ ಕೃಷ್ಣನ್, ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್ ನ 8ರ ಘಟ್ಟ ತಲುಪಿದ್ದಾರೆ...

ದೋಹಾ: ಭಾರತದ ಬಾಕ್ಸರ್ ಗಳಾದ ಶಿವ ಥಾಪಾ ಹಾಗೂ ವಿಕಾಸ್ ಕೃಷ್ಣನ್, ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್ ನ 8ರ ಘಟ್ಟ ತಲುಪಿದ್ದಾರೆ. 
ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಈ ಇಬ್ಬರೂ ತಮಗಿಂತಲೂ ಅಗ್ರ ಶ್ರೇಯಾಂಕಿತ ಆಟಗಾರರನ್ನು ಸೋಲಿಸಿದ್ದು ವಿಶೇಷವಾಗಿತ್ತು. ತಮಗಿಂತಲೂ ಬಲಿಷ್ಠರಾದ, ಆಫ್ರಿಕಾದ ಚಾಂಪಿಯನ್ ಮೊರಕ್ಕೊದ ಅಗ್ರ ಬಾಕ್ಸರ್ ಹಮೌಟ್ ವಿರುದ್ಧ 56 ಕೆಜಿ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಸೆಣಸಿದ ಶಿವಥಾಪಾ ಉತ್ತಮ ಪೈಪೋಟಿ ನೀಡಿ, ತಮ್ಮ ಪಾಲಿನ ಕ್ಲಿಷ್ಟಕರ ಪಂದ್ಯವನ್ನು ಜಯಿಸಿದರು. 
75 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಕಾಸ್ ಕೃಷ್ಣನ್, ಕ್ರೀಡಾಕೂಟದ 4ನೇ ಶ್ರೇಯಾಂಕಿತ ಪೋಲೆಂಡ್‍ನ ಥಾಮಸ್ ಜಬ್ಲೊಂಸ್ಕಿ ವಿರುದ್ಧ 21 ಅಂತರದಲ್ಲಿ ಜಯ ಸಾಧಿಸಿದರು. 
8ರ ಘಟ್ಟದ ಪಂದ್ಯ: ಶಿವ ಅವರು ತಮ್ಮ ಮುಂದಿನ ಪಂದ್ಯದಲ್ಲಿ ಕತಾರ್‍ನ ಹಕನ್ ಎರ್ಸೇಕರ್ ವಿರುದ್ಧ, ವಿಕಾಸ್ ಅವರು ಈಜಿಪ್ಟ್‍ನ ಹೊಸಮ್ ಅಬ್ದಿನ್ ವಿರುದ್ಧ ಸೆಣಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಯಿಸಿರುವ ಭಾರತೀಯ ಬಾಕ್ಸರ್‍ಗಳ ತಂಡದ ಕೋಚ್ ಗುರ್ಬಾಕ್ಸ್ ಸಿಂಗ್, 'ದಿನದಾಟದಲ್ಲಿ ಶಿವಥಾಪಾ ಅವರ ಉತ್ತಮ ಪಂಚ್‍ಗಳು ಹಾಗೂ ಸೂಕ್ತ ಸಮಯದಲ್ಲಿ ಎದುರಾಳಿಯನ್ನು ಹಿಮ್ಮೆಟ್ಟಿಸುವ ತಂತ್ರಗಾರಿಕೆ ಮೆಚ್ಚುವಂಥಾದ್ದು. ಇನ್ನು, ವಿಕಾಸ್ ಬಲವನ್ನು ಪ್ರಯೋಗಿಸುವುದಕ್ಕಿಂತ ಬುದ್ಧಿಯನ್ನು ಪ್ರಯೋಗಿಸಿ ಆಡಿದ ಅವರ ಆಟ ಇಷ್ಟವಾಯಿತು'' ಎಂದು ಹೊಗಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಂತಿ ಮಾತುಕತೆ ವಿಫಲ: ಅಮೆರಿಕ ಟೆಹ್ರಾನ್‌ನ ವಿಶ್ವಾಸ ಗಳಿಸಲು ಸಾಧ್ಯವಾಗಲಿಲ್ಲ; ಇರಾನ್ ಸ್ಪೀಕರ್

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

IPL 2026: ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ; RR vs RCB ಪಂದ್ಯದ 'ಭ್ರಷ್ಟಾಚಾರ ವಿರೋಧಿ' ಶಿಷ್ಟಾಚಾರ ಉಲ್ಲಂಘನೆಗೆ BCCI ಖಡಕ್ ಪ್ರತಿಕ್ರಿಯೆ

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

SCROLL FOR NEXT