ಸಾನಿಯಾ ಮಿರ್ಜಾ, ಮಾರ್ಟಿನಾ ಹಿಂಗೀಸ್ 
ಕ್ರೀಡೆ

ಸಾನಿಯಾ ಮಿರ್ಜಾ-ಹಿಂಗಿಸ್ ಸೆಮೀಸ್‍ಗೆ

ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜತೆಗಿನ ತನ್ನ ಗೆಲುವಿನ ಯಾನವನ್ನು ಮುಂದುವರೆಸಿರುವ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಚೀನಾ ಓಪನ್ ಟೆನಿಸ್...

ಬೀಜಿಂಗ್: ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜತೆಗಿನ ತನ್ನ ಗೆಲುವಿನ ಯಾನವನ್ನು ಮುಂದುವರೆಸಿರುವ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಚೀನಾ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. 
ವರ್ಷದ ಎಂಟನೇ ಡಬ್ಲ್ಯೂಟಿಎ ಪ್ರಶಸ್ತಿಗಾಗಿ ಹೋರಾಡು ತ್ತಿರುವ ಇಂಡೋಸ್ವಿಸ್ ಜೋಡಿ, ಗುರುವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಜರ್ಮನ್ಜೆಕ್ ಜೋಡಿಯಾದ ಜುಲಿಯಾ ಜಾರ್ಜಸ್ ಮತ್ತು ಕರೋಲಿನಾ ಪ್ಲಿಸ್ಕೋವಾ ವಿರುದ್ಧ 76 (5), 64 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿ ಉಪಾಂತ್ಯಕ್ಕೆ ಲಗ್ಗೆ ಹಾಕಿದರು. 1 ತಾಸು, 19 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಸಾನಿಯಾಹಿಂಗಿಸ್ ಮೊದಲ ಸೆಟ್‍ನಲ್ಲಿ ತೀವ್ರ ಪ್ರತಿಸ್ಪರ್ಧೆ ಎದುರಿಸಿದರೂ, ಎರಡನೇ ಸೆಟ್‍ನಲ್ಲಿ ಸುನಾಯಾಸವಾಗಿ ಜಯ ಸಾಧಿಸಿದರು. 
ಇದೇ ಮಾರ್ಚ್ ಮಾಸದಲ್ಲಿ ಜತೆಯಾದ ಸಾನಿಯಾ ಹಾಗೂ ಹಿಂಗಿಸ್ ಜೋಡಿ ವಿಶ್ವ ಡಬ್ಲ್ಯೂ ರ್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದೂ ಅಲ್ಲದೆ, ಈ ಋತುವಿನಲ್ಲಿ ವಿಂಬಲ್ಡನ್, ಯುಎಸ್ ಓಪನ್ ಗ್ರಾಂಡ್‍ಸ್ಲಾಮ್ ಪ್ರಶಸ್ತಿಗಳನ್ನೂ ಒಳಗೊಂಡಂತೆ ಈಗಾ ಗಲೇ 7 ಪ್ರಶಸ್ತಿಗಳನ್ನು ಜಯಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

120 ಶಾಸಕರ ಬಲ ಸಿಗುತ್ತಿದ್ದಂತೆ ಲೋಕಭವನದತ್ತ ವಿಜಯ್ ದೌಡು: ಸರ್ಕಾರ ರಚನೆಗೆ TVK ಹಕ್ಕು ಮಂಡನೆ!

ವಿಜಯ್ -VCK ಡೀಲ್ ಅಂತಿಮ! EPS ನಿಗೂಢ ಪೋಸ್ಟ್ ಅರ್ಥವೇನು?

ಸುವೇಂದು ಪ್ರಮಾಣವಚನ ಬೆನ್ನಲ್ಲೇ CM ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೂ X, FB ಬಯೋ ಅಪ್‌ಡೇಟ್ ಮಾಡಿದ ಮಮತಾ!

ತುಮಕೂರು: ಕಾರು - ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು

'ಪ್ರಮಾಣವಚನಕ್ಕೂ ಮುನ್ನ ದಳಪತಿ ವಿಜಯ್-ತ್ರಿಶಾ ಮದುವೆಯಾಗಬೇಕು': ರಾಖಿ ಸಾವಂತ್ ಶಾಕಿಂಗ್ ಹೇಳಿಕೆ

SCROLL FOR NEXT