ಕರ್ನಾಟಕ ರಣಜಿ ತಂಡದ ನಾಯಕ ವಿನಯ್ ಕುಮಾರ್ 
ಕ್ರೀಡೆ

ರಣಜಿ ಟ್ರೋಫಿ ; 3 ಅಂಕಕ್ಕೆ ತೃಪ್ತಿ ಪಟ್ಟುಕೊಂಡ ಕರ್ನಾಟಕ

ಪಶ್ಚಿಮ ಬಂಗಾಳ ನಾಯಕ ಮನೋಜ್ ತಿವಾರಿ ಶತಕ ಮತ್ತು ನವೀದ್ ಅಹಮದ್ ಅರ್ಧ ಶತಕದ ನೆರವಿನಿಂದ ಬಂಗಾಳ ತಂಡ ಕರ್ನಾಟಕ ವಿರುದ್ಧ ಡ್ರಾ ಸಾಧಿಸಲು ...

ಬೆಂಗಳೂರು: ಪಶ್ಚಿಮ ಬಂಗಾಳ ನಾಯಕ ಮನೋಜ್ ತಿವಾರಿ ಶತಕ ಮತ್ತು ನವೀದ್ ಅಹಮದ್ ಅರ್ಧ ಶತಕದ ನೆರವಿನಿಂದ ಬಂಗಾಳ ತಂಡ ಕರ್ನಾಟಕ ವಿರುದ್ಧ ಡ್ರಾ ಸಾಧಿಸಲು ಸಫಲವಾಗಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕಕ್ಕೆ 3 ಅಂಕ ಲಭಿಸಿದೆ.

ಕಡೆಗೂ ಕರ್ನಾಟಕ ಬೌಲರ್​ಗಳ ಕೈ ಹಿಡಿಯಲಿಲ್ಲ. ಮೊದಲ ಪಂದ್ಯದಲ್ಲಿ ಇನಿಂಗ್ಸ್ ಹಿನ್ನಡೆ ಅನುಭವಿಸಿ 1 ಅಂಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಹಾಲಿ ಚಾಂಪಿಯನ್ ಕರ್ನಾಟಕ, ಪ್ರಸಕ್ತ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತವರಿನಲ್ಲಿ ಗೆಲುವಿನ ಅಭಿಯಾನ ಆರಂಭಿಸುವ ಕನಸು ಈಡೇರಲಿಲ್ಲ. ಇನಿಂಗ್ಸ್ ಗೆಲುವಿನ ಲೆಕ್ಕಾಚಾರದಲ್ಲಿದ್ದ ವಿನಯ ಕುಮಾರ್ ನೇತೃತ್ವದ ಪಡೆ, ಬಂಗಾಳ ನಾಯಕ ಮನೋಜ್ ತಿವಾರಿ (103*ರನ್, 197 ಎಸೆತ, 13 ಬೌಂಡರಿ) ಹಾಗೂ ನವೀದ್ ಅಹಮದ್ (95ರನ್, 248 ಎಸೆತ, 16 ಬೌಂಡರಿ) ಶತಕ ವಂಚಿತ ಬ್ಯಾಟಿಂಗ್​ನಿಂದಾಗಿ ನಿರಾಸೆಯಲ್ಲಿ ಮುಳುಗಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 2 ವಿಕೆಟ್​ಗೆ 58ರನ್​ಗಳಿಂದ ದಿನದಾಟ ಆರಂಭಿಸಿದ ಪ್ರವಾಸಿ ಬಂಗಾಳ ತಂಡ 4 ವಿಕೆಟ್​ಗೆ 249 ರನ್​ಗಳಿಸಿದ್ದ ವೇಳೆ ಮಳೆ ಸುರಿದ ಕಾರಣ ಪಂದ್ಯ ಸ್ಥಗಿತಗೊಳಿಸಲಾಯಿತು. ಭಾರಿ ಮಳೆಯಿಂದಾಗಿ ದಿನದಾಟದ ಅಂತಿಮ ಅವಧಿಯ ಸುಮಾರು 57 ನಿಮಿಷಗಳ ಆಟ ರದ್ದುಗೊಂಡಿತು. ಈ ವೇಳೆಗೆ ಕರ್ನಾಟಕದ ಮೊದಲ ಇನಿಂಗ್ಸ್ ಮುನ್ನಡೆಯ 225ರನ್ ಚುಕ್ತಾ ಮಾಡಿದ್ದ ಪ್ರವಾಸಿ ತಂಡ 24 ರನ್​ಗಳ ಅಲ್ಪಮುನ್ನಡೆ ಗಳಿಸಿತ್ತು. ಮೊದಲ ಇನಿಂಗ್ಸ್​ನಲ್ಲಿ ಬಂಗಾಳ 312ರನ್​ಗಳಿಸಿದ್ದರೆ, ಕರ್ನಾಟಕ 9 ವಿಕೆಟ್​ಗೆ 537ರನ್​ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದರಿಂದ 2 ಪಂದ್ಯಗಳಿಂದ 4 ಅಂಕ ಸಂಪಾದಿಸಿರುವ ಕರ್ನಾಟಕ ‘ಬಿ’ ಗುಂಪಿನಲ್ಲಿ 4 ಸ್ಥಾನ ಪಡೆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT