ಸಾಂದರ್ಭಿಕ ಚಿತ್ರ 
ಕ್ರೀಡೆ

ಐಎಸ್‍ಎಲ್: ತವರಿನಲ್ಲಿ ಮಿಂಚು ಹರಿಸಿದ ಹಾಲಿ ಚಾಂಪಿಯನ್ ಅಟ್ಲೆಟಿಕೊ

ಮಿಡ್ ಫೀಲ್ಡರ್‍ಗಳಾದ ಜಾವಿ ಲಾರಾ ಹಾಗೂ ಅರಾರಾ ಇಜುಮಿ ದಾಖಲಿಸಿದ ತಲಾ ಒಂದೊಂದು ಗೋಲುಗಳ ನೆರವಿನಿಂದಾಗಿ ಅಟ್ಲೆಕಿಕೊ ಡಿ ಕೋಲ್ಕತಾ ಪ್ರಸಕ್ತ ಆವೃತ್ತಿಯ...

ಕೋಲ್ಕತಾ: ಮಿಡ್ ಫೀಲ್ಡರ್‍ಗಳಾದ ಜಾವಿ ಲಾರಾ ಹಾಗೂ ಅರಾರಾ ಇಜುಮಿ ದಾಖಲಿಸಿದ ತಲಾ ಒಂದೊಂದು ಗೋಲುಗಳ ನೆರವಿನಿಂದಾಗಿ ಅಟ್ಲೆಕಿಕೊ ಡಿ ಕೋಲ್ಕತಾ ಪ್ರಸಕ್ತ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‍ಎಲ್) ಟೂರ್ನಿಯ 10ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಪರಾಭವಗೊಳಿಸಿತು. ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ 6ನೇ ನಿಮಿಷದ ಪಂದ್ಯದಲ್ಲಿ ಆಟಗಾರ ಲಾರಾ ದಾಖಲಿಸಿದ ಗೋಲಿನಿಂದ 1-0 ಅಂತರದ ಮುನ್ನಡೆ ಸಾಧಿಸಿದ ಕೋಲ್ಕತಾ, ಪಂದ್ಯದ ಕೊನೆಯವರೆಗೂ ಬಾರಿ  ಅಂತರವನ್ನು ಕಾಯ್ದುಕೊಂಡಿತು.

ಆನಂತರ, ದ್ವಿತೀಯಾರ್ಧದಲ್ಲಿ ಜಪಾನ್ ಸಂಜಾತ ಭಾರತೀಯ ಆಟಗಾರ ಅರಾರಾ ಇಜುಮಿ, ಪಂದ್ಯದ 53ನೇ ನಿಮಿಷದಲ್ಲಿ ಕೋಲ್ಕತಾಕ್ಕೆ 2ನೇ ಗೋಲು ತಂದಿತ್ತರು. ಈ ಮೂಲಕ, ಕೇರಳದ ವಿರುದ್ಧ ಇನ್ನಷ್ಟು ಪ್ರಾಬಲ್ಯ ಮೆರೆದ  ಕೋಲ್ಕತಾ ಗೆಲುವಿನ ಗುರಿಯತ್ತ ದಾಪುಗಾಲಿಟ್ಟಿತು.

ಆವರೆಗೆ ಗೋಲು ಗಳಿಸುವಲ್ಲಿ ತನಗೆ ಸಿಕ್ಕಿದ್ದ ಹಲವಾರು ಅವಕಾಶಗಳನ್ನು ಕೈ ಚೆಲ್ಲಿದ್ದ ಕೇರಳ ತಂಡಕ್ಕೆ ಪಂದ್ಯದ ಕೊನೆಯ ಹಂತದಲ್ಲಿ ಯಶಸ್ಸು ದಕ್ಕಿತು.  80ನೇ ನಿಮಿಷದಲ್ಲಿ ಇಂಗ್ಲೆಂಡ್ ನ  ಸ್ಟ್ರೈಕರ್  ಕ್ರಿಸ್ ಡಾಗ್ನಲ್  ಗಳಿಸಿದ ಗೋಲು ಕೇರಳ ತಂಡದ ಗೋಲಿನ ಖಾತೆ ತೆರೆಯುವಂತೆ ಮಾಡಿತು.  ಆದರೂ, ತನ್ನ ದುರ್ಬಲ ಆಟದಿಂದಾಗಿ ಕೋಲ್ಕೋತಾ ವಿರುದ್ಧ ಅದು ಶರಣಾಗಲೇಬೇಕಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT