ಕ್ರೀಡೆ

ಯೂಕಿ ಭಾಂಬ್ರಿಗೆ ಅಗ್ರ ಶ್ರೇಯಾಂಕ

Srinivas Rao BV

ಬೆಂಗಳೂರು: ಭಾರತದ ಭರವಸೆಯ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಎಟಿಪಿ ಏರ್ ಏಷ್ಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಪಡೆದಿದ್ದಾರೆ.
ಆ ಮೂಲಕ ಟೂರ್ನಿಯಲ್ಲಿ ಯೂಕಿ, ಭಾರತದ ಹೋರಾಟವನ್ನು ಮುನ್ನಡೆಸಲಿದ್ದಾರೆ. ಇದೇ ತಿಂಗಳು 19ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ವಿಶ್ವ ರ್ಯಾಂಕಿಂಗ್‍ನಲ್ಲಿ 137ನೇ ಸ್ಥಾನ ಪಡೆದಿರುವ ಸ್ಪೇನ್‍ನ ಆ್ಯಡ್ರಿಯಾನ್ ಮೆನೇಜ್ ಮರ್ಸಿರಾಸ್ ಮತ್ತು 157ನೇ ಸ್ಥಾನದಲ್ಲಿರುವ
ಬ್ರಿಟನ್‍ನ ಜೇಮ್ಸ್ ವಾರ್ಡ್ ಕ್ರಮವಾಗಿ ಎರಡು ಮತ್ತು ಮೂರನೇ ಶ್ರೇಯಾಂಕ ಪಡೆದಿದ್ದಾರೆ. ಟಾಶ್ಕೆಂಟ್ ಓಪನ್ ಪಂದ್ಯಾವಳಿಯ ಸೆಮಿ ಫೈನಲ್ ಸುತ್ತಿಗೆ ಪ್ರವೇಶಿಸಿದ ನಂತರ ವಿಶ್ವ ರ್ಯಾಂಕಿಂಗ್
ನಲ್ಲಿ ಅಗ್ರ 100ರಲ್ಲಿ ಸ್ಥಾನ ಪಡೆಯಲಿರುವ ಯೂಕಿ ಅತ್ಯುತ್ತಮ ಲಯದಲ್ಲಿದ್ದು, ರೂ. 34.42 ಲಕ್ಷ ಬಹುಮಾನ ಮೊತ್ತದ ಟೂರ್ನಿಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ.
ಈ ಟೂರ್ನಿಯಲ್ಲಿ ಭಾರತದ ಇತರೆ ಆಟಗಾರರಾದ ಸೋಮ್ ದೇವ್,  ಸಾಕೇತ್ ಮೈನೇನಿ, ಸನಮ್ ಸಿಂಗ್, ರಾಮಕುಮಾರ್ ರಾಮನಾಥನ್ ಮತ್ತು ವಿಜಯ್ ಸುಂದರ್ ಪ್ರಶಾಂತ್ ಕೂಡ ಭಾಗವಹಿಸುತ್ತಿದ್ದಾರೆ.

SCROLL FOR NEXT