ವಿನಯ್ ಕುಮಾರ್ 
ಕ್ರೀಡೆ

ರಣಜಿ ಮೂರನೇ ಸುತ್ತು: ವಿದರ್ಭ ವಿರುದ್ಧ ವಿನಯ್ ಪಡೆಗೆ 133 ರನ್ ಮುನ್ನಡೆ

ಪ್ರವಾಸಿಗರ ವಿರುದ್ಧ ಇನಿಂಗ್ಸ್ ಮುನ್ನಡೆ ಪಡೆಯುವ ಹೋರಾಟದಲ್ಲಿ ಕೊನೆಗೂ ಯಶಸ್ವಿಯಾದ ಕರ್ನಾಟಕ ತಂಡ, ವಿದರ್ಭ ವಿರುದ್ಧ ನಡೆಯುತ್ತಿರುವ ಪಂದ್ಯದ ...

ಬೆಂಗಳೂರು: ಪ್ರವಾಸಿಗರ ವಿರುದ್ಧ ಇನಿಂಗ್ಸ್ ಮುನ್ನಡೆ ಪಡೆಯುವ ಹೋರಾಟದಲ್ಲಿ ಕೊನೆಗೂ ಯಶಸ್ವಿಯಾದ ಕರ್ನಾಟಕ ತಂಡ, ವಿದರ್ಭ ವಿರುದ್ಧ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ವಿದರ್ಭ ತಂಡದ ಮೊದಲ ಇನ್ನಿಂಗ್ಸ್ ಅನ್ನು 310ಕ್ಕೆ ಮೊಟಕುಗೊಳಿಸಿದ ಕರ್ನಾಟಕ ಆನಂತರ ತನ್ನ ದ್ವೀತಿಯಾ ಇನ್ನಿಂಗ್ಸ್ ಆರಂಭಿಸಿ ದಿನಾಂತ್ಯಕ್ಕೆ 1 ವಿಕೆಟ್ ಗೆ 93 ರನ್ ಗಳಿಸಿದೆ. ಆರಂಭಿಕ ಕೆ.ಎಲ್ ರಾಹುಲ್, ಹಾಗೂ ಸಮರ್ಥ್  ಭಾನುವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಅರ್ಧಶತಕ ವಂಚಿತ ಉತ್ತಪ್ಪ:
40 ರನ್ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಉತ್ಸಾಹದಿಂದಲೇ ತನ್ನ 2ನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ಆರಂಭಿಕರಾದ ರಾಬಿನ್ ಉತ್ತಪ್ಪ ಹಾಗೂ ಕೆ.ಎಸ್ ರಾಹುಲ್ ತಾಳ್ಮೆಯ ಆಟ ಪ್ರದರ್ಶಿಸಿದರು. ಅದರಲ್ಲೂ ವಿದರ್ಭ ಬೌಲರ್‍ಗಳ ತಂತ್ರಗಾರಿಕೆಯನ್ನು ಸಮರ್ಥವಾಗಿ ಎದುರಿಸಿದ ಉತ್ತಪ್ಪ, ಆಗಾಗ ಭರ್ಜರಿ ಹೊಡೆತಗಳನ್ನು ಬಾರಿಸುತ್ತಾ ಕ್ರೀಡಾಂಗಣದಲ್ಲಿದ್ದ ಜನರನ್ನು ರಂಜಿಸಿದರು. ಆದರೆ, ಅರ್ಧಶತಕದಂಚಿಗೆ ಬಂದಿದ್ದಾಗ ಉತ್ತಪ್ಪ (46 ರನ್, 123 ಎಸೆತ 8 ಬೌಂಡರಿ) ಬಂಡೀವರ್ ಗೆ ವಿಕೆಟ್ ಒಪ್ಪಿಸಿದರು.

ಶತಕ ವಂಚಿತ ಬದರೀನಾಥ್: ಇತ್ತ ದಿನಾದಟದ ಮೊದಲ ಸೆಷನ್ ನಲ್ಲೇ ರಾಜ್ಯದ ಬೌಲರ್ ಗಳಿಗೆ ಯಶ ದಕ್ಕಿತು. ಶುಕ್ರವಾರ ದಿನಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದ್ದ ವಿದರ್ಭ. ಮೂರನೇ ದಿನದಂದು 138 ರನ್ ಗೆ ಉಳಿದ ಎಂಟು ವಿಕೆಟ್ ಕಳೆದುಕೊಂಡಿತು.

ದಿನದ ಮೊದಲ ಓವರ್ ನ 3 ನೇ ಎಸೆತದಲ್ಲಿ, ಅರವಿಂದ್ ಕ್ರೀಸ್ ನಲ್ಲಿ ಗಟ್ಟಿಯಾಗಿ ಬೇರೂರಿದ್ದ ಗಣೇಶ್ ಸತೀಶ್ ಹಾಗೂ ನಾಯಕ ಎಸ್ . ಬದರಿನಾಥ್ ಜೋಡಿಯನ್ನು ಮುರಿದು ವಿದರ್ಭ ಪತನಕ್ಕೆ ಶ್ರೀಕಾರ ಹಾಕಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ ಇಲ್ನೋಡಿ, ಪುಡಿ ರೌಡಿಗಳ ಹಾವಳಿ : Parameshwar ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT