ಸ್ಟಾರ್ ಆಟಗಾರರಿಂದ ತುಂಬಿ ತುಳುಕುತ್ತಿದ್ದ ಏರ್ ಇಂಡಿಯಾ ಪುರುಷರ ಹಾಕಿ ತಂಡ, 2ನೇ ಬೆಂಗಳೂರು ಕಪ್ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸೋಮವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ, ಏರ್ ಇಂಡಿಯಾ ತಂಡ, ಐಒಸಿಎಲ್ ತಂಡದ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಏರ್ ಇಂಡಿಯಾ ಪರ, ವಿಕ್ರಮ್ ಪಿಳ್ಳೈ (14ನೇ ನಿಮಿಷ), ಬೀರೇಂದ್ರ ಲಾಕ್ರಾ (16ನೇ ನಿಮಿಷ), ಜೋಗಾ ಸಿಂಗ್ (24ನೇ ನಿಮಿಷ) ಗೋಲು ದಾಖಲಿಸಿದರೆ, ಎದುರಾಳಿ ತಂಡದ ಕಡೆಯಿಂದ ಸುನಿಲ್ ಯಾದವ್ (52ನೇ ನಿಮಿಷ) ಗೋಲು ಗಳಿಸಿಕೊಟ್ಟರು. ಹರ್ಯಾಣಕ್ಕೆ ಸತತ 2ನೇ ಪ್ರಶಸ್ತಿ ವನಿತೆಯರ ವಿಭಾಗದಲ್ಲಿ ಹರ್ಯಾಣ ತಂಡ, ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಬುಧವಾರ ನಡೆದ ಮಧ್ಯಪ್ರದೇಶ ವಿರುದ್ಧ ಪ್ರಶಸ್ತಿ ಸುತ್ತಿನ ಹಣಾಹಣಿಯ ಟೈಬ್ರೇಕರ್‍ನಲ್ಲಿ ಗಳಿಸಿದ 2-1 ಗೋಲುಗಳ ಅಂತರದಲ್ಲಿ ಹರ್ಯಾಣ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಗೋಲು ರಹಿತ ಆಟದೊಂದಿಗೆ ಅಂತ್ಯಗೊಂಡಿದ್ದರಿಂದ ಪೆನಾಲ್ಟಿ ಅವಕಾಶವನ್ನು ಬಳಸಿಕೊಳ್ಳಲಾಯಿತು.
.