ಮಹೇಂದ್ರ ಸಿಂಗ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ 
ಕ್ರೀಡೆ

ಕ್ರಿಕೆಟ್ ನಲ್ಲಿ ಸಚಿನ್ ನನಗೆ ದೇವರ ರೀತಿ ಇದ್ದರು: ಧೋನಿ

ಕ್ರಿಕೆಟ್ ದಂತಕತೆ, ಸಚಿನ್ ತೆಂಡೂಲ್ಕರ್ ನನಗೆ ಆದರ್ಶ, ಅವರ ನಮ್ರತೆ,ಹಾಗೂ ನಡವಳಿಕೆ ಆಟದಲ್ಲಿ ಇತರ ಆಟಗಾರರಿಗೆ ಸ್ಪೂರ್ತಿ...

ನ್ಯೂಯಾರ್ಕ್: ಕ್ರಿಕೆಟ್ ದಂತಕತೆ, ಸಚಿನ್ ತೆಂಡೂಲ್ಕರ್ ನನಗೆ ಆದರ್ಶ, ಅವರ ನಮ್ರತೆ,ಹಾಗೂ ನಡವಳಿಕೆ ಆಟದಲ್ಲಿ ಇತರ ಆಟಗಾರರಿಗೆ ಸ್ಪೂರ್ತಿ ಎಂದು ಭಾರತ ಏಕದಿನ ಕ್ರಿಕೆಟ್ ಸರಣಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಡಿ ಹೊಗಳಿದ್ದಾರೆ.

ಅಮೆರಿಕಾದ ನ್ಯೂಜೆರ್ಸಿಯಲ್ಲಿ ಬಿಹಾರ ಜಾರ್ಖಂಡ್ ಅಸೋಸಿಯೇಷನ್  ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ನಾನು ಕ್ರಿಕೆಟ್ ಕಲಿಯುವಾಗ ಸಚಿನ್ ತೆಂಡೂಲ್ಕರ್  ಆದರ್ಶ ಪ್ರಾಯವಾಗಿದ್ದರು. ಅವರು ನನಗೆ ದೇವರಂತೆ ಇದ್ದರು. ಸತತ ಕಠಿಣ ಅಭ್ಯಾಸದಲ್ಲಿ ಸಚಿನ್ ನಂಬಿಕೆ ಇಟ್ಟಿದ್ದರು ಎಂದು ಧೋನಿ ಹೇಳಿದ್ದಾರೆ,

ಸಚಿನ್  ಸಾಧನೆಯ ಉತ್ತುಂಗದಲ್ಲಿದ್ದರು ಹಾಗೇಯೆ ಅವರು ನಮ್ರತೆಯನ್ನು ಮೈಗೂಡಿಸಿಕೊಂಡಿದ್ದರು. ಕ್ರಿಕೆಟ್ ಆಡಲು ಪ್ರತಿಭಾರಿ ಮೈದಾನಕ್ಕಿಳಿದಾಗ ತಮ್ಮ ಆಟವನ್ನು ಉತ್ತಮ ಪಡಿಸಿಕೊಳ್ಳುತ್ತಿದ್ದರು ಎಂದು ಧೋನಿ ಹೊಗಳಿದ್ದಾರೆ. ಅವರ ಆಟ ಇತರ ಕ್ರಿಕೆಟ್ ಆಟಗಾರರಗಿಗೆ ಸ್ಪೂರ್ತಿಯಾಗಿತ್ತು ಎಂದು ಧೋನಿ ತಿಳಿಸಿದರು. ಶೀಘ್ರವೇ ತಾವು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪ್ರದರ್ಶನ ನೀಡುವುದಾಗಿ ಅಭಿಮಾನಿಗಳಿಗೆ ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ